No menu items!
13.9 C
Munich
Wednesday, April 29, 2026

ಧೋನಿ ಅಬ್ಬರಕ್ಕೆ ಆಸೀಸ್ ಉಡೀಸ್..! ಆಸ್ಟ್ರೇಲಿಯಾ ನೆಲದಲ್ಲಿ ಭಾರತಕ್ಕೆ ಐತಿಹಾಸಕ ಸರಣಿ ಜಯ..

Must read

ಧೋನಿ ಅಬ್ಬರಕ್ಕೆ ಆಸೀಸ್ ಉಡೀಸ್..! ಆಸ್ಟ್ರೇಲಿಯಾ ನೆಲದಲ್ಲಿ ಭಾರತಕ್ಕೆ ಐತಿಹಾಸಕ ಸರಣಿ ಜಯ..

ಮೆಲ್ಬೋರ್ನ್ ಮೈದಾನದಲ್ಲಿ ನಡೆದ ಇಂಡಿಯಾ ಹಾಗು ಆಸ್ಟ್ರೇಲಿಯಾ ವಿರುದ್ದದ 3ನೇ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಬಾರಿ ಅಂತರದಲ್ಲಿ ಗೆಲುವನ್ನ ತನ್ನದಾಗಿಸಿಕೊಂಡಿದೆ.. ಈ ಮೂಲಕ 2-1 ಅಂತರದಲ್ಲಿ ಏಕದಿನ ಸರಣಿಯನ್ನ ತನ್ನ ವಶ ಮಾಡಿಕೊಂಡಿದೆ..

ಆಸ್ಟ್ರೇಲಿಯಾ ನೀಡಿದ 231 ರನ್ ಗಳ ಗುರಿಯನ್ನ ಬೆನ್ನತ್ತಿದ ಭಾರತ ಕೇವಲ 9 ರನ್ ಕಲೆಹಾಕುವಲ್ಲಿ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತ್ತು.. ಶಿಖರ್ ಧವನ್ 23 ರನ್ ಕಲೆ ಹಾಕಿ ವಿಕೆಟ್ ಒಪ್ಪಿಸಿದ್ರು.. ಆನಂತರ ಜೊತೆಯಾದ ಕೊಹ್ಲಿ ಹಾಗು ವಿರಾಟ್ ಸಮಯೋಚಿತ 50 ರನ್ ಗಳ ಜೊತೆಯಾಟವಾಡಿದ್ರು.. ಈ ಹಂತದಲ್ಲಿ ಕೊಹ್ಲಿ ಆಫ್ ಸೆಂಚುರಿ ಹೊಸಲಿನಲ್ಲಿ ಔಟ್ ಆಗುವ ಮೂಲಕ 46 ರನ್ ಗಳಿಸಿದ್ರು…

ನಂತರ ಧೋನಿ ಟೀಮ್ ಇಂಡಿಯಾ ಗೆಲುವಿಗೆ ಮಹತ್ತರ ಆಟವಾಡಿದ್ರು.. ಇವರಿಗೆ ಕೇದರ್ ಜಾದವ್ ಕೂಡ ಸಾಥ್ ನೀಡಿದ್ದು, 3 ವಿಕೆಟ್ ಕಳೆದುಕೊಂಡು ಭಾರತ ರನ್ ಚೇಸ್ ಮಾಡಿ ಗೆದ್ದು ಬೀಗಿತ್ತು.. ಧೋನಿ 114 ಎಸೆತಗಳಲ್ಲಿ 87 ರನ್ ಕಲೆಹಾಕುವ ಮೂಲಕ ಭಾರತವನ್ನ ಗೆಲುವಿನ ದಡ ಸೇರಿಸಿದ್ರು.. ಹೀಗಾಗೆ ಧೋನಿ ಪಂದ್ಯ ಪುರುಷೋತ್ತಮ ಅವಾರ್ಡ್ ಅನ್ನ ತಮ್ಮದಾಗಿಸಿಕೊಂಡ್ರು..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article