24 ಗಂಟೆ ನಾನ್ ಸ್ಟಾಪ್ ಪ್ರದರ್ಶನ..!! ನಟಸಾರ್ವಭೌಮನ ಹೊಸ ರೆಕಾರ್ಡ್..!!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾ ರಿಲೀಸ್ ಆದ್ರೆ ಸಾಕು, ಹಲವು ದಾಖಲೆಗಳು ಹುಟ್ಟಿಕೊಳ್ಳುತ್ತವೆ..ಅದರ ಜೊತೆಗೆ ಹಳೆ ದಾಖಲೆಗಳು ಅಳಿಸಿ ಹೋಗುತ್ತವೆ.. ಸದ್ಯ ಪವರ್ ಸ್ಟಾರ್ ಅಭಿನಯದ ನಟಸಾರ್ವಭೌಮ ಚಿತ್ರ ಇದೇ ದಾರಿಯಲ್ಲಿ ಸಾಗುತ್ತಿದೆ.. ಈಗಾಗ್ಲೇ ಎಲ್ಲೆಡೆ ಟಿಕೆಟ್ ಗಳು ಆನ್ ಲೈನ್ ಮೂಲಕ ಭರ್ಜರಿ ಸೇಲ್ ಆಗುತ್ತಿದೆ.. ಅಭಿಮಾನಿಗಳು ಇನ್ನೇರಡು ದಿನ ಯಾವಾಗ ಆಗಲಿದೆ ಅಂತ ಕಾದು ನೋಡುತ್ತಿದ್ದಾರೆ…
ಹೀಗಿರುವಾಗಲೇ ನಟಸಾರ್ವಭೌಮ ಹೊಸದೊಂದು ದಾಖಲೆ ಬರೆಯುತ್ತಿದೆ.. ಇಡೀ ಸೌತ್ ಸಿನಿ ದುನಿಯಾದಲ್ಲೇ ಯಾರು ಮಾಡದ ಸಾಧನೆ ಇದು.. ಹೌದು ನಟಸಾರ್ವಭೌಮ ಚಿತ್ರ ಸತತ 24 ಗಂಟೆಗಳ ಪ್ರದರ್ಶನ ಕಾಣಲಿದೆ.. ರಾತ್ರಿ 12 ಗಂಟೆಗೆ ಶುರುವಾಗಿ ಮರುದಿನ ರಾತ್ರಿ 12 ಗಂಟೆವರೆಗು ಪ್ರದರ್ಶನ ಕಾಣುವ ಮೂಲಕ ಸೌತ್ ಸಿನಿ ದುನಿಯಾದಲ್ಲಿ 24 ಗಂಟೆ ನಿರಂತರ ಪ್ರದರ್ಶನ ಕನ್ನಡ ಮೊದಲ ಸಿನಿಮಾವಾಗಿ ನಟಸಾರ್ವಭೌಮ ದಾಖಲೆ ಬರೆಯಲಿದೆ.
ಸದ್ಯ ಪರಭಾಷ ಚಿತ್ರಗಳ ಬಿಡುಗಡೆ ಸೀಮಿತವಾಗಿದ್ದ ಊರ್ವಶಿ ಥಿಯೇಟರ್ ನಲ್ಲಿ ನಟಸಾರ್ವಭೌಮ ತೆರೆ ಕಾಣ್ತಿದೆ.. ಇಲ್ಲಿಯೂ ಈಗಾಗ್ಲೇ ಟಿಕೇಟ್ ಗಳು ಸೇಲ್ ಆಗುತ್ತಿದ್ದು, 24 ಗಂಟೆಗಳ ಪ್ರದರ್ಶನ ಹೊಸ ಇತಿಹಾವನ್ನ ಬರೆಯುತ್ತಿದೆ..