ಶ್ರೀಲಂಕಾ ವಿರುದ್ಧ 97 ರನ್ ಗಳ ಜಯ ವಿಶ್ವಕಪ್ ಗೆಲುವಿಗೆ ಇರುವುದು ಇನ್ನೊಂದೇ ಮೆಟ್ಟಿಲು..!

Date:

ಅನ್ಮೋಲ್ ಪ್ರೀತ್ ಸಿಂಗ್(72) ಮತ್ತು ಸರ್ಫರಾಜ್ ಖಾನ್(59)ರ ಅರ್ಧಶತಕ ಹಾಗೂ ಬೌಲರ್ ಗಳ ಸಂಘಟಿತ ದಾಳಿಯ ನೆರವಿನಿಂದ ಭಾರತ ಕಿರಿಯರ ತಂಡ 19 ವರ್ಷದೊಳಗಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಲ್ಲಿ ಶ್ರೀಲಂಕಾ ತಂಡವನ್ನು 97 ರನ್ ಗಳಿಂದ ಬಗ್ಗು ಬಡೆದು ಫೈನಲ್ ಪ್ರವೇಶಿಸಿದೆ.
ಡಾಕಾದ ಶೇರ್ ಬಂಗಾಲ್ ನ್ಯಾಷನಲ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಎದುರಾಳಿಗಳ ಆಹ್ವಾನದ ಮೇರೆಗೆ ಬ್ಯಾಟಿಂಗ್ಗೆ ಇಳಿದ ಭಾರತ ತಂಡ ನಿಗಧಿತ 50 ಓವರ್ ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 267ರನ್ ಗಳನ್ನು ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಶ್ರೀಲಂಕಾ 42.4 ಓವರ್ ಪೂರೈಸುವಲ್ಲಿ ಕೇವಲ 170ರನ್ ಗಳನ್ನು ಗಳಿಸಲಷ್ಟೇ ಶಕ್ತವಾಗಿ ಭಾರತಕ್ಕೆ ತಲೆಬಾಗಿತು.
ನಾಯಕ ಇಶಾನ್ ಕಿಶನ್ (7) ಮತ್ತು ಇನ್ನೊಬ್ಬ ಆರಂಭಿಕ ರಿಶಬ್ ಪಂತ್ ವಿಕೆಟ್ ಅನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ ಭಾರತಕ್ಕೆ ಆಸರೆಯಾಗಿ ಅನ್ಮೋಲ್ ಪ್ರೀತ್ ಸಿಂಗ್ ಮತ್ತು ಸರ್ಫರಾಜ್ ಖಾನ್ ಮತ್ತು ವಾಷಿಂಗ್ ಟನ್ ಸುಂದರ್ (43) ಆಸರೆಯಾದರು. ಇವರ ಜವಬ್ದಾರಿಯುತ ಆಟದ ನೆರವಿನಿಂದ ಭಾರತ ಸವಾಲಿನ ಮೊತ್ತವನ್ನು ಎದುರಾಳಿಗಳಿಗೆ ನೀಡುವಲ್ಲಿ ಯಶಸ್ವಿಯಾಯಿತು.
ಸವಾಲಿನ ಗುರಿ ಬೆನ್ನಟ್ಟಿದ ಶ್ರೀಲಂಕಾ ಭಾರತದ ಬೌಲರ್ ಗಳ ಸಂಘಟಿತ ದಾಳಿಯನ್ನು ಎದುರಿಸುವಲ್ಲಿ ವಿಫಲವಾಗಿ 97 ರನ್ಗಳ ಅಂತರದಲ್ಲಿ ಸೋಲನ್ನಪ್ಪಿಕೊಂಡಿತು. ಭಾರತದ ಪರ ಅವೇಶ್ ಖಾನ್ 2ವಿಕೆಟ್, ಮಯಾಂಕ್ ಡಗಾರ್ 3 ವಿಕೆಟ್ ಹಾಗೂ ರಾಹುಲ್ ಬಾತಮ್, ಕಲೀಲ್ ಅಹ್ಮದ್ ಮತ್ತು ವಾಷಿಂಗ್ ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಬಾರಿ ವಿಶ್ವಕಪ್ ಟೂನರ್ಿಯಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿರುವ ಭಾರತ, ಎರಡನೇ ಸೆಮಿಫೈನಲ್ಲಿ ಗೆದ್ದ ತಂಡದ ಎದುರು ಅಂತಿಮ ಪಂದ್ಯದಲ್ಲಿ ಸೆಣಸಲಿದೆ. (ಬಾಂಗ್ಲ ಅಥವಾ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಪಂದ್ಯದದಲ್ಲಿ ಯಾರು ಗೆಲ್ಲುತ್ತಾರೋ ಅವರೊಡನೆ ಭಾರತ ಪ್ರಶಸ್ತಿಗಾಗಿ ಸೆಣಸಲಿದೆ) ವಿಶ್ವಕಪ್ ಗೆಲುವಿಗೆ ಇನ್ನೊಂದೇ ಮೆಟ್ಟಿಲು. ಕನ್ನಡಿಗ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಉತ್ತಮ ಆಟ ಪ್ರದಶರ್ಿಸುತ್ತಾ ಫೈನಲ್ ತಲುಪಿರುವ ಹುಡುಗರು ಪ್ರಶಸ್ತಿಗೆ ಮುತ್ತಿಕ್ಕುವಂತಾಗಲಿ ಎಂದು ಹಾರೈಸೋಣ..!

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...