ಮತ್ತೆ ವೀಕ್ಷಕರಿಗೆ ಟ್ರಾಯ್ ನಿಂದ ಗಡುವು..!! ಎಷ್ಟು ದಿನಗಳ ಒಳಗೆ ನೀವು ಚಾನೆಲ್ ಗಳನ್ನ ಆಯ್ಕೆ ಮಾಡಿಕೊಳ್ಳಬೇಕು ಗೊತ್ತಾ..??
ಟ್ರಾಯ್ ಸಂಸ್ಥೆ ತಂದಿರುವ ಹೊಸ ನೀತಿಯ ಬಗ್ಗೆ ಇನ್ನು ಗೊಂದಲಗಳು ಹಾಗೆ ಮುಂದುವರೆದಿದೆ.. ಹೀಗಾಗೆ 17 ಕೋಟಿ ಟಿವಿ ಚಾನೆಲ್ ಗ್ರಾಹಕರಲ್ಲಿ ಕೇವಲ 9 ಕೋಟಿ ಗ್ರಾಹಕರು ಮಾತ್ರ ತಮಗೆ ಇಷ್ಟವಾದ ಚಾನೆಲ್ ಗಳನ್ನ ಆಯ್ಕೆಮಾಡಿಕೊಂಡಿದ್ದಾರೆ.. ಹೀಗಾಗೆ ಟ್ರಾಯ್ ತರಲು ಹೊರಟಿರುವ ಹೊಸ ನಿಯಮಕ್ಕೆ ಮತ್ತೆ ಹಿನ್ನಡೆಯಾಗುತ್ತಿದೆ…
ಇದರಿಂದ ಎಚ್ಚೆತ್ತಿರುವ ಟ್ರಾಯ್ ಸಂಸ್ಥೆ ಮತ್ತೆ ತನ್ನ ಟಿವಿ ಗ್ರಾಹಕರಿಗೆ ಮಾರ್ಚ್ 31 ರ ವರೆಗೆ ಗಡುವು ನೀಡಿದ್ದು, ಇಷ್ಟರೊಳಗೆ ನಿಮ್ಮ ನೆಚ್ಚಿನ ಚಾನೆಲ್ ಗಳ ಆಯ್ಕೆ ಮಾಡಿಕೊಳ್ಳುವಂತೆ ಶಿಫಾರಸ್ಸು ಮಾಡಿದೆ.. ಈಗಾಗ್ಲೇ ಬಾರ್ಕ್ ನೀಡಿರುವ ವರದಿಯ ಪ್ರಕಾರ ಈ ನಿಯಮದಿಂದ ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗ ಆಗಲಿದೆ ಎಂದಿದೆ..
ಆದರೆ ಚಾನೆಲ್ ಗಳ ಆಯ್ಕೆಯಲ್ಲಿ ನಿಗ ವಹಿಸಿದ್ರೆ ಗ್ರಾಹಕರು ಹೆಚ್ಚಿನ ಬಿಲ್ ಅನ್ನ ಪಾವತಿಸುವುದನ್ನ ತಪ್ಪಿಸಿಕೊಳ್ಳ ಬಹುದಾಗಿದೆ.. ಸದ್ಯ ಎಲ್ಲ ಚಾನೆಲ್ ಗಳಿಗೆ ತಮ್ಮ ವಾಹಿನಿಯ ಬೆಲೆಯನ್ನ ಪ್ರಸಾರ ಮಾಡುವಂತೆ ಆದೇಶ ನೀಡಲಾಗಿದ್ದು, ಇದನ್ನ ತಪ್ಪದೆ ಪಾಲಿಸುತ್ತಿವೆ.. ನಿಮ್ಮ ಟಿವಿ ಸ್ಕ್ರೀನ್ ಮೇಲೆ ಬರುವ ಚಾನೆಲ್ ಗಳ ಬೆಲೆಯ ಆಧಾರದ ಮೇಲೆ ನಿಮ್ಮ ತಿಂಗಳ ಪ್ಯಾಕ್ ಅನ್ನ ನೀವು ಆಯ್ಕೆ ಮಾಡಿಕೊಳ್ಳ ಬಹುದಾಗಿದೆ..