ದರ್ಶನ್ ಗಿಂತ ದೊಡ್ಡ ಸ್ಟಾರ್ ಕೈಯಲ್ಲಿಯೇ ತನ್ನ ನಟಭಯಂಕರ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿಸಿದ ಪ್ರಥಮ್..
ಪ್ರಥಮ್ ತಮ್ಮ ಸಿನಿಮಾಗೆ ಸಂಬಂಧಿದಂತೆ ಒಂದಲ್ಲ ಒಂದು ಗಿಮಿಕ್ ಮಾಡ್ತಾನೆ ಇರ್ತಾರೆ… ಈಗ ನಟಭಯಂಕರ ಚಿತ್ರದ ಸರದಿ.. ಈ ಹಿಂದೆ ತನ್ನ ಫೇಸ್ ಬುಕ್ ನಲ್ಲಿ ದರ್ಶನ್ ಅವರಿಗಿಂತ ದೊಡ್ಡ ಸ್ಟಾರ್ ನ ಕರೆಸಿ ತನ್ನ ಸಿನಿಮಾದ ಪೋಸ್ಟರ್ ಅನ್ನ ರಿಲೀಸ್ ಮಾಡೋದಾಗಿ ಹೇಳಿದ್ರು..
ಈತನ ಈ ಮಾತಿಗೆ ದಚ್ಚು ಫ್ಯಾನ್ಸ್ ಕೆಂಡಮಂಡಲವಾಗಿದ್ರು.. ಜೊತೆಗೆ ದರ್ಶನ್ ಗಿಂತ ದೊಡ್ಡ ಸ್ಟಾರ್ ಇಲ್ಲ ಅಂತ ಪ್ರಥಮ್ ಗೆ ಫೇಸ್ ಬುಕ್ ನಲ್ಲಿ ಚಳಿ ಬಿಡಿಸಿದ್ರು.. ಆದರೇ ಈಗ ದರ್ಶನ್ ಅಭಿಮಾನಿಗಳನ್ನ ತಣ್ಣಗಾಗಿಸುವಲ್ಲಿ ಪ್ರಥಮ್ ಯಶಸ್ವಿಯಾಗಿದ್ದಾರೆ.. ಹೌದು ದರ್ಶನ್ ಗಿಂತ ದೊಡ್ಡ ಸ್ಟಾರ್ ಕೈಯಲ್ಲೇ ಚಿತ್ರದ ಪೋಸ್ಟರ್ ಅನ್ನ ರಿಲೀಸ್ ಮಾಡಿಸಿದ್ದಾರೆ..
ಅದು ಬೇರೆ ಯಾರು ದಚ್ಚು ಅವರ ತಾಯಿ ಮೀನಾ ತೂಗದೀಪ್ ಅವರಿಂದ.. ಪ್ರಥಮ್ ಅಭಿನಯದ ನಟ ಭಯಂಕರ ಪೋಸ್ಟರ್ ಅನ್ನ ರಿಲೀಸ್ ಮಾಡಿದ ಮೀನಾ ತೂಗುದೀಪ್, ಪ್ರಥಮ್ ತನ್ನ ಮಗ ಇದ್ದಹಾಗೆ, ಈ ಚಿತ್ರ ಯಶಸ್ವಿಯಾಗಲಿ ಅಂತ ಹಾರೈಸಿದ್ದಾರೆ..