ಯಶ್ ಮನೆಗೆ‌ ನಾಳೆ‌ ಬರ್ತಿದೆ ಅಂಬರೀಶ್ ಅವರು ಗಿಫ್ಟ್ ಆಗಿ ಬುಕ್ ಮಾಡಿದ್ದ ತೊಟ್ಟಿಲು..

Must read

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ದಂಪತಿಗಳ ಮುದ್ದು ಮಗುವಿಗೆ ರೆಬಲ್ ಸ್ಟಾರ್ ಅಂಬರೀಷ್ ಅವರು ಪ್ರೀತಿಯಿಂದ ಬುಕ್ ಮಾಡಿದ್ದ ತೊಟ್ಟಿಲು ನಾಳೆಯೇ  ಯಶ್ ಮನೆಗೆ ತಲುಪಲಿದೆ. ಹೌದು, ಅಂಬಿ ಯಾರಿಗೂ ಗೊತ್ತಾಗದಂತೆ, ಯಶ್ ಮಗುವಿಗೆ ತೊಟ್ಟಿಲು ಬುಕ್ ಮಾಡಿದ್ದರು. ಇದೀಗ ಮಗುವಿಗೆ ಕೊಟ್ಟ ಉಡುಗೊರೆ ನಾಳೆ ಯಶ್ ಮನೆಗೆ ತಲುಪಲಿದೆ.

ಅಂಬರೀಶ್ ನೀಡಿದ ಈ ತೊಟ್ಟಿಲಿಗೆ ಕಿತ್ತೂರಿನಲ್ಲಿ ನಾಳೆ ಅಂದ್ರೆ ಫೆಬ್ರವರಿ 16ರಂದು ವಿಶೇಷ ಪೂಜೆ ನಡೆಯಲಿದೆ. ತೊಟ್ಟಿಲ ಮೇಲೆ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳ ಕಥೆಗಳನ್ನು ಸಾರುವ ಚಿತ್ರಗಳನ್ನು ಕೆತ್ತಲಾಗಿದೆಯಂತೆ. ಇಂಥ ಶ್ರೇಷ್ಠ ತೊಟ್ಟಿಲು ನಾಳೆಯೇ ಯಶ್–ರಾಧಿಕಾ ದಂಪತಿಗಳ ಕೈ ಸೇರಲಿದೆ.

ಅಂಬಿಯ ಆಶಯದಂತೆ 1.5 ಲಕ್ಷ ರೂಪಾಯಿ ಮೌಲ್ಯದ ತೊಟ್ಟಿಲು ನಿರ್ಮಾಣವಾಗಿದ್ದು, ಯಶ್ ಮತ್ತು ರಾಧಿಕಾ ದಂಪತಿಗೆ ಸುಮಲತಾ ಅಂಬರೀಶ್ ಉಡುಗೊರೆಯಾಗಿ ನೀಡಲಿದ್ದಾರೆ.

- Advertisement -spot_img

More articles

- Advertisement -spot_img

Latest article