ಶಿವಣ್ಣ ಅಭಿನಯದ ಟಗರು ಚಿತ್ರದ ಚಿಟ್ಟೆ ಹಾಗೂ ಡಾಲಿ ಜೋಡಿ ಮತ್ತೆ ಒಂದಾಗಿದೆ. ಹೌದು, ಧನಂಜಯ್ ಹಾಗೂ ವಸಿಷ್ಠ ಕಾಂಬಿನೇಷನ್ ನಲ್ಲಿ ಹೊರ ಬರ್ತಿದೆ ಮತ್ತೊಂದು ಚಿತ್ರ. ಟಗರು ನಂತರ ಇವರಿಬ್ಬರನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಎಂಬುದು ಪ್ರೇಕ್ಷಕರ ಕೋರಿಕೆಯಾಗಿತ್ತು. ಈಗ ಈ ಜೋಡಿಯನ್ನು ಒಟ್ಟಿಗೆ ತರುವ ಮೂಲಕ ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ ನಿರ್ದೇಶಕ ಸಂತೋಷ ಆನಂದ್ ರಾಮ್.ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರಕ್ಕೆ ವಿಲನ್ ಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಡಾಲಿ ಹಾಗೂ ಚಿಟ್ಟೆ. ರಾಜಕುಮಾರ ನಂತರ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಸಂತೋಷ ಆನಂದ್ ರಾಮ್ ಹಾಗೂ ಪುನೀತ್ ರಾಜ್‍ಕುಮಾರ್. ನಟ ಧನಂಜಯ್ ಈ ಚಿತ್ರದಲ್ಲಿ ಖಳನಾಯಕ ಎಂಬುದು ಖಚಿತವಾಗಿದೆ. ಆದರೆ ಚಿಟ್ಟೆ ಅಲಿಯಾಸ್ ವಸಿಷ್ಠ ಸಿಂಹ ಅವರ ಪಾತ್ರ ಹೇಗಿರಲಿದೆ ಎನ್ನುವ ವಿಚಾರ ಇನ್ನಷ್ಟೇ ತಿಳಿದು ಬರಬೇಕಿದೆ.
ಅಲ್ಲದೆ ಬಹಳ ವರ್ಷಗಳಿಂದ ವಸಿಷ್ಠ ಅವರಿಗೆ ಪವರ್ ಸ್ಟಾರ್ ಜೊತೆ ನಟಿಸುವ ಆಸೆ ಇತ್ತು, ಇದೀಗ ಈ ಚಿತ್ರದ ಮೂಲಕ ವಸಿಷ್ಠ ಅವರ ಅನೇಕ ದಿನಗಳ ಕನಸು ಈಡೇರುತ್ತಿದೆ. ಒಟ್ಟಿನಲ್ಲಿ ಟಗರು ನಂತರ ಒಂದಾದ ಈ ಖಡಕ್ ಜೋಡಿ ಯಾವ ರೀತಿ ಕಮಾಲ್ ಮಾಡಲಿದೆ ಎಂಬುದು ಗಾಂಧಿ ನಗರದಲ್ಲಿ ಭಾರಿ ಕುತೂಹಲ ಸೃಷ್ಟಿಸಿದೆ.
ಮತ್ತೆ ಒಂದಾದ ಡಾಲಿ-ಚಿಟ್ಟೆ.. ಯಾವ ಚಿತ್ರಕ್ಕಾಗಿ ಗೊತ್ತಾ..?
Date: