ಯಜಮಾನ ಪರಭಾಷೆಗಳಲ್ಲಿ ಯಾಕೆ ಡಬ್ ಆಗಿಲ್ಲ ಅನ್ನೋದ್ರ ಬಗ್ಗೆ ಡಿ ಬಾಸ್ ಹೇಳಿದ್ದು ಹೀಗೆ…
ಕೆಜಿಎಫ್ ಸಿನಿಮಾ ಬಹುಭಾಷೆಗಳಲ್ಲಿ ತೆರೆಗೆ ಬಂದ ಬಳಿಕ ಕನ್ನಡದ ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳಿಗೆ ಡಬ್ಬಿಂಗ್ ಆಫರ್ ಹೆಚ್ಚಾಗಿದೆ.. ಹೀಗಾಗೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸೇರಿದಂತೆ ಹಲವು ಚಿತ್ರಗಳು ಬಹು ಭಾಷೆಗಳಲ್ಲಿ ತೆರೆಗೆ ಬರೋಕೆ ಸಿದ್ದವಾಗಿದೆ.. ಈ ನಿಟ್ಟಿನಲ್ಲಿ ದರ್ಶನ್ ಅವರ ಯಜಮಾನ ಮಾತ್ರ ಕನ್ನಡ ಭಾಷೆಯೊಂದರಲ್ಲೆ ಬಿಡುಗಡೆಗೊಳ್ತಿದೆ..
ಈ ಬಗ್ಗೆ ಸ್ವತಃ ದರ್ಶನ್ ಅವರನ್ನ ಕೇಳಿದ್ರೆ ಅವರು ಹೇಳಿದ್ದು ಹೀಗೆ.. ‘ ನಾವು ಮೊದಲೇ ಪ್ಲಾನ್ ಮಾಡಿರಲಿಲ್ಲ. ಸಿನಿಮಾ ರಿಲೀಸ್‌ಗೂ ಮುನ್ನವೇ ನಾವು ಇಷ್ಟು ಭಾಷೆಯಲ್ಲಿ ಮಾಡುತ್ತೇವೆ ಎಂದಿದ್ದರೆ ಅದಕ್ಕೆ ತಕ್ಕಂತೆ ಶೂಟಿಂಗ್ ಮಾಡುತ್ತಿದ್ದೆವು. ಈಗ ಸಡನ್ ಆಗಿ ಡಬ್ ಮಾಡಿದರೆ ಎಲ್ಲರೂ ಒಪ್ಪಿಕೊಳ್ಳಲ್ಲ. ಇದೇ ಹಿಂದಿಗೆ ಡಬ್ ಆಗಿದ್ದರೆ ನಾನೇ ನೋಡಲ್ಲ. ಥೂ ಏನಿದು ಹಿಂಗಿದೆ ಅಂದುಬಿಡುತ್ತೇನೆ ಎಂದಿದ್ದಾರೆ.
ಇನ್ನು ಇದೇ ಮಾರ್ಚ್ 1 ಕ್ಕೆ ಬಿಡುಗಡೆಯಾಗ್ತಿರುವ ಸಿನಿಮಾ ಅಂದು ಬೆಳಗ್ಗೆ 7 ಗಂಟೆಗೆ ತನ್ನ ಮೊದಲ ಪ್ರದರ್ಶನವನ್ನ ಶುರು ಮಾಡಲಿದೆ.. ಹೀಗಾಗೆ ರಿಲೀಸ್ ಒಂದು ದಿನ ಮುಂಚಿತವಾಗಿ ಯಾವುದೇ ಷೋಗಳನ್ನ ಆಯೋಜಿಸಿಲ್ಲ ಎಂಬುದನ್ನ ಕೂಡ ಇದೇ ಸಂದರ್ಭದಲ್ಲಿ ಸ್ಪಷ್ಟ ಪಡೆಸಿದ್ದಾರೆ..