ಕವಿತಾ-ಆಂಡಿ ಸಮರದಲ್ಲಿ ಶಶಿ ಬ್ಯಾಟ್ ಬೀಸಿದ್ದು ಯಾರ ಪರ..??

Must read

ಬಿಗ್ ಬಾಸ್ ಮುಗಿದರು, ಬಿಗ್ ಬಾಸ್ ಮನೆಯಲ್ಲಿ ಹತ್ತಿಕೊಂಡ ಬೆಂಕಿ ಮಾತ್ರ ಇನ್ನು ಆರಿಲ್ಲ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸುದ್ದಿಯಾಗಿದ್ದು ಆಂಡಿ. ಮನೆಯಲ್ಲಿ ಸ್ಪರ್ಧಿಗಳಿಗೆ ಮಾಡಿದ ಕಿರಿಕಿರಿ ಎಲ್ಲರಿಗೂ ತಿಳಿದಿದೆ. ಅಲ್ಲದೆ ಈ‌ ಹಿಂದೆ ಸ್ಪರ್ಧಿಗಳಿಗೆ ಹಾನಿಕಾರಕ ಸ್ಪ್ರೇ ಕಣ್ಣಿಗೆ ಹೊಡೆದ ಕಾರಣ ಆಂಡಿ ವಿರುದ್ಧ ಠಾಣೆಯಲ್ಲಿ ದೂರ ದಾಖಲಾಗಿತು.

ನಂತರ ಮನೆಯಿಂದ ಹೊರ ಬಂದ್ಮೇಲೆ ತಿದ್ದುಕೊಳ್ಳುವುದಾಗಿ ಹೇಳಿದ ಆಂಡಿ ಇದೀಗ ಕವಿತಾ ಅವರಿಗೆ ಕಿರುಕುಳ ನೀಡಲಾಗಿದ್ದು, ಈ ಬಗ್ಗೆ ಕವಿತಾ ಮಹಿಳಾ ಆಯೋಗಕ್ಕೆ ದೂರು ನೀಡಿದರು. ದೂರ ನೀಡಿದ ಬೆನ್ನೆಲ್ಲೇ ಆಂಡಿ ವಿರುದ್ದ ವರ ವಿರೋಧ ವ್ಯಕ್ತವಾಯಿತು. ಇದೀಗ ಇದಕ್ಕೆ ಕವಿತಾ ಆಪ್ತ ಸ್ನೇಹಿತ ಹಾಗೂ ಬಿಗ್ ಬಾಸ್ ವಿಜೇತ ಶಶಿ ಪ್ರತಿಕ್ರಿಯಿಸಿದ್ದಾರೆ.ಆಂಡಿ ವಿರುದ್ದ ಕವಿತಾ ಮಹಿಳಾ ಆಯೋಗಕ್ಕೆ ನೀಡಿರುವ ದೂರಿನ ಬಗ್ಗೆ ಶಶಿ ಯಾರು ಪರ ಗೊತ್ತಾ..? ನಾನು ಯಾರ ಬೆಂಬಲಕ್ಕೂ ನಿಲ್ಲುವುದಿಲ್ಲ, ಬದಲಾಗಿ ನ್ಯಾಯದ ಪರ ಇದ್ದೇನೆ. ಕವಿತಾ ಅವರಿಗೆ ತೊಂದರೆಯಾಗಿದ್ರೆ, ಮಹಿಳಾ ಆಯೋಗದವರು ಅವರಿಬ್ಬರನ್ನು ವಿವಾರಣೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ.

- Advertisement -spot_img

More articles

- Advertisement -spot_img

Latest article