ನಾಳೆ ನಡೆಯಲಿದೆ ಮೊದಲ ಟಿ-20 ಫೈಟ್.. ಈತನ ಅನುಪಸ್ಥಿತಿ ಕಾಡಲಿದ್ಯಾ ಟೀಮ್ ಇಂಡಿಯಾಗೆ..!!?
ನಾಳೆ ವಿಶಾಖಪಟ್ಟಣಂ ನಲ್ಲಿ ಭಾರತ ಹಾಗು ಆಸ್ಟ್ರೇಲಿಯಾ ತಂಡ ಮೊದಲ ಟಿ-20 ಮ್ಯಾಚ್ ನಡೆಯಲಿದೆ.. ಕ್ರಿಕೆಟ್ ಅಭಿಮಾನಿಗಳು ನಾಳಿನ ಹೈಓಲ್ಟೋಜ್ ಮ್ಯಾಚ್ ಗಾಗಿ ಕಾದುಕುಳಿತ್ತಿದ್ದಾರೆ.. ವಿಶ್ವಕಪ್ ಗು ಮೊದಲೇ ಈ ಸರಣಿ ಟೀಮ್ ಇಂಡಿಯಾ ಆಟಗಾರಿಗೆ ಅಗ್ನಿಪರೀಕ್ಷೆಯಾಗಿದ್ದು, ವಿಶ್ವಕಪ್ ತಂಡ ಸೇರಿಕೊಳ್ಳಲು ಪಡೆದಿರುವ ಸ್ಥಾನವನ್ನ ಉಳಿಸಿಕೊಳ್ಳಲು ಆಟಗಾರರಿಗೆ ಇದೊಂದೆ ಚಾನ್ಸ್…
ಬ್ಯಾಟಿಂಗ್ ಹಾಗು ಬೌಲಿಂಗ್ ವಿಭಾಗದಲ್ಲಿ ಸದೃಢವಾದ ತಂಡ ಟೀಮ್ ಇಂಡಿಯಾದಾಗಿದ್ರು, ಆಸ್ಟ್ರೇಲಿಯಾ ತಂಡದಲ್ಲು ಟಿ-20 ಸ್ಪೆಷಲಿಸ್ಟ್ ಗಳಿದ್ದಾರೆ.. ಹೀಗಾಗೆ ಸಮಬಲದ ಕಾದಾಟಕ್ಕೆ ಈ ಸರಣಿ ಸಾಕ್ಷಿಯಾಗಲಿದೆ.. ಈ ನಡುವೆ ಆಲ್ ರೌಂಡರ್ ಖೋಟಾದಲ್ಲಿ ಸ್ಥಾನ ಪಡೆದುಕೊಂಡಿದ್ದು ಉತ್ತಮ ಫಾರ್ಮ್ ನಲ್ಲಿರುವ ಹಾರ್ದಿಕ್ ಪಾಂಡ್ಯ ಬೆನ್ನು ನೋವಿನಿಂದ ಸರಣಿಯಿಂದ ಹೊರಗುಳಿದಿದ್ದು, ಅವರ ಸ್ಥಾನವನ್ನ ಜಡೇಜಾ ಪಡೆದುಕೊಂಡಿದ್ದಾರೆ…
ಹಾರ್ದಿಕ್ ಬೌಲಿಂಗ್ ನ ಜೊತೆ ಜೊತೆಗೆ ಬ್ಯಾಟಿಂಗ್ ನಲ್ಲು ಸೌಂಡ್ ಮಾಡಿದ ಆಟಗಾರ ಉತ್ತಮ ಫಾರ್ಮ್ ನಲ್ಲಿರುವಾಗಲೇ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದು, ಇವರ ಸ್ಥಾನವನ್ನ ಸಮರ್ಥವಾಗಿ ಆಲ್ ರೌಂಡರ್ ಖೋಟಾದಲ್ಲಿ ಸ್ಥಾನ ಪಡೆಯುವ ಆಟಗಾರರು ನಿಭಾಯಿಸ್ತಾರ ಅಥವಾ ಹಾರ್ದಿಕ ಅನುಪಸ್ಥಿತಿ ಟೀಮ್ ಗೆ ಕಾಡಲಿದ್ಯಾ ಅನ್ನೋದನ್ನ ಕಾದು ನೋಡ್ಬೇಕು..