ಏರ್ ಶೋ ಬೆಂಕಿ ಅನಾಹುತದಲ್ಲಿ ಕಾರು ಕಳೆದುಕೊಂಡವರಿಗಾಗಿ ಸಹಾಯ ಕೇಂದ್ರ ಆರಂಭ..

Must read

ಏರ್ ಶೋ ಬೆಂಕಿ ಅನಾಹುತದಲ್ಲಿ ಕಾರು ಕಳೆದುಕೊಂಡವರಿಗಾಗಿ ಸಹಾಯ ಕೇಂದ್ರ ಆರಂಭ..

ಇಂದು ಏರ್ ಶೋನಲ್ಲಿ ಲೋಹದ ಹಕ್ಕಿಗಳ ಸಾಹಸವನ್ನ ಕಣ್ತುಂಬಿಕೊಳ್ಳಲು ನೆರೆದಿದ್ದ ಅಭಿಮಾನಿಗಳಿಗೆ ಬೆಂಕಿ ಬಿಸಿ ಮುಟ್ಟಿತ್ತು.. ಅಲ್ಲಿ ಏರ್ ಶೋ ವೀಕ್ಷಿಸಲು ಕುಟುಂಬ, ಸ್ನೇಹಿತರ ಜೊತೆಗೆ ಒಳಗೆ ಸೇರಿದ್ರೆ, ಇತ್ತ ಅವರ ಕಾರುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿತ್ತು.. ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಚರಣೆಯಿಂದ ಆಗಬಹುದಾದ ಮತ್ತಷ್ಟು ದೊಡ್ಡ ಅನಾಹುತಗಳು ತಪ್ಪಿತ್ತಾದ್ರು 300 ಕ್ಕೂ ಹೆಚ್ಚು ಕಾರ್ ಗಳು ಸುಟ್ಟು ಹೋದ್ವು..

ಈ ಅಗ್ನಿ ಅವಘಗಡದಲ್ಲಿ ಕಾರ್ ಮಾಲೀಕರು ಮುಂದೇನು ಮಾಡುವುದು ಎಂಬ ಗೊಂದಲದಲ್ಲಿದ್ದಾರೆ.. ಹೀಗಾಗೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸಹಾಯವಾಣಿಯನ್ನ ಪ್ರಾರಂಭಿಸಿದ್ದಾರೆ.. ವಾಹನದ ನೊಂದಣಿ ಮತ್ತು ಚಾಲನಾ ಪತ್ರಗಳ ವಿವರಗಳನ್ನ ಪಡೆಯಲು ಬೇಕಾಗುವ ವಿಧಿ ವಿಧಾನಗಳನ್ನು ತಿಳಿದುಕೊಳ್ಳಲು ಸಾರಿಗೆ ಇಲಾಖಾ ವತಿಯಿಂದ ಪ್ರಾದೇಶಿಕ ಸಾರಿಗೆ ಕಚೇರಿ, ಯಲಹಂಕದಲ್ಲಿ ಸಹಾಯ ಕೇಂದ್ರವನ್ನ ಪ್ರಾರಂಭಿಸಲಾಗಿದೆ, ಸಹಾಯ ಕೇಂದ್ರದ ದೂರವಾಣಿ ಸಂಖ್ಯೆ 080-29729908, 29729909 ಮೊಬೈಲ್ 9449864050 ಆಗಿದೆ..

ತಮ್ಮ ಕಾರನ್ನ ಕಳೆದುಕೊಂಡವರು, ಈ ಕೇಂದ್ರದ ಉಪಯೋಗವನ್ನ ಪಡೆದುಕೊಳ್ಳಲು ಸೂಚಿಸಲಾಗಿದೆ.. ನಾಳೆಯಿಂದ ಈ ಸಹಾಯ ಕೇಂದ್ರವು ಕಾರ್ಯನಿರ್ವಹಿಸಲಿದೆ..

- Advertisement -spot_img

More articles

- Advertisement -spot_img

Latest article