ಒಂದೇ ಸಿನಿಮಾಕ್ಕೆ ಸುದೀಪ್ – ದರ್ಶನ್ ಬಲ…! ದಚ್ಚು-ಕಿಚ್ಚ ಸಾಥ್ ನೀಡಿರೋದು ಯಾವ ಸಿನಿಮಾಕ್ಕೆ?

Date:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದೇ ಸಿನಿಮಾಕ್ಕೆ ಹೆಗಲು ಕೊಟ್ಟಿದ್ದಾರೆ..!
ಒಂದು ಕಾಲದಲ್ಲಿ ಆತ್ಮೀಯ ಗೆಳೆಯರಾಗಿದ್ದ ದರ್ಶನ್ – ಸುದೀಪ್ ಅವರ ನಡುವೆ ಉಂಟಾದ ಸಣ್ಣ ಮುನಿಸು, ಭಿನ್ನಾಭಿಪ್ರಾಯ ಇಬ್ಬರನ್ನೂ ದೂರ ಮಾಡಿರುವುದು ಯಾರಿಗೂ ತಿಳಿಯದ ಸಂಗತಿಯೇನಲ್ಲ..! ಆದರೆ, ಮುನಿಸಿನ ನಡುವೆಯೂ ಇಬ್ಬರೂ ಒಂದೇ ಸಿನಿಮಾಕ್ಕೆ‌ ಹೆಗಲು ಕೊಟ್ಟಿದ್ದಾರೆ.
ಏನು? ಸುದೀಪ್ ಮತ್ತು ದರ್ಶನ್ ಮತ್ತೆ ಒಂದಾದ್ರಾ? ಅಷ್ಟೇ ಅಲ್ಲದೇ ಒಂದೇ ಸಿನಿಮಾದಲ್ಲಿ ನಟಿಸುತ್ತಾರಾ ಎಂದು ಕೇಳ್ತಿದ್ದೀರಾ?
ಸದ್ಯಕ್ಕೆ ಇಂಥಾ ಒಂದು ದೊಡ್ಡ ನ್ಯೂಸ್ ಸಿಕ್ಕಿಲ್ಲ.‌ವಿಷಯ ಏನಪ್ಪ ಅಂದ್ರೆ, ದರ್ಶನ್ ಮತ್ತು ಸುದೀಪ್ ಬಲ ಸಿಕ್ಕಿರುವುದು ಉದ್ಘರ್ಷ ಸಿನಿಮಾಕ್ಕೆ.
ಹೌದು, ಸಸ್ಪೆನ್ಸ್, ಥ್ರಿಲ್ಲರ್ ಮಾದರಿಯ ಚಿತ್ರಗಳಿಗೆ ಫೇಮಸ್ ಆಗಿರುವ ಸುನೀಲ್ ಕುಮಾರ್ ದೇಸಾಯಿ ಅವರ ನಿರ್ದೇಶನದ ಚಿತ್ರ ‘ಉದ್ಘರ್ಷ’ಕ್ಕೆ ಸುದೀಪ್- ದರ್ಶನ್ ಬಲ ತುಂಬಿದ್ದಾರೆ.
ಕನ್ನಡ, ತೆಲುಗು, ಮಲೆಯಾಳಂ, ತಮಿಳು ಭಾಷೆಗಳಲ್ಲಿ ರಿಲೀಸ್ ಆಗಲಿರುವ ‘ಉದ್ಘರ್ಷ’ ಸಿನಿಮಾ ರಿಲೀಸ್ ಗೂ ಮುನ್ನವೇ ಸಕತ್ ಸುದ್ದಿಯಲ್ಲಿದೆ. ಕನ್ನಡ, ತೆಲುಗು, ಮಲೆಯಾಳಂನಲ್ಲಿ ‘ಉದ್ಘರ್ಷ’ ಎನ್ನುವ ಹೆಸರಲ್ಲಿಯೇ ಸಿನಿಮಾ ಬರುತ್ತಿದೆ. ತಮಿಳಿನಲ್ಲಿ ‘ಉಚ್ಚಕಟ್ಟಂ’ ಎಂಬ ಹೆಸರಲ್ಲಿ ರಿಲೀಸ್ ಆಗುತ್ತಿದೆ.
ಈ ನಡುವೆ ಈ ಸಿನಿಮಾಕ್ಕೆ ದರ್ಶನ್ ಮತ್ತು ಸುದೀಪ್ ಸಾಥ್ ನೀಡಿದ್ದಾರೆ.
ಈಗಾಗಲೇ ನಿಮಗೆ ಗೊತ್ತೇ ಇರುವಂತೆ ಸುದೀಪ್ ಈ ಸಿನಿಮಾಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಇನ್ನು ದರ್ಶನ್ ಮಾರ್ಚ್ 5 ರಂದು ಅಂದರೆ, ಇಂದು ಟ್ರೇಲರ್ ರಿಲೀಸ್ ಮಾಡಲಿದ್ದಾರೆ. ಹೀಗೆ ದರ್ಶನ್ ಮತ್ತು ಸುದೀಪ್ ಉದ್ಘರ್ಷಕ್ಕೆ ಸಾಥ್ ನೀಡಿದ್ದಾರೆ.
ಮಿಸ್ಟರ್ ವರ್ಲ್ಡ್ ಖ್ಯಾತಿಯ ಠಾಕೂರ್ ಅನೂಪ್ ಸಿಂಗ್ ನಾಯಕನಾಗಿದ್ದು, ಕಬಾಲಿ ಖ್ಯಾತಿಯ ಧನ್ಸಿಕಾ, ಬಸಣ್ಣಿ ಖ್ಯಾತಿಯ ತಾನ್ಯಾ ಹೋಪ್, ಕಬೀರ್ ಸಿಂಗ್ ಸೇರಿದಂತೆ ದೊಡ್ಡ ತಾರಗಣದ ಬಲ ಚಿತ್ರಕ್ಕಿದೆ.

Share post:

Subscribe

spot_imgspot_img

Popular

More like this
Related

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು ಬೆಂಗಳೂರು: ವಾಲ್ಮೀಕಿ...

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ:...

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ ಚಿತ್ರದುರ್ಗ:...