ಶಿವಣ್ಣನಿಗೆ ಶಿವಣ್ಣನ ಡ್ಯಾನ್ಸ್ ಗೆ ಫಿದಾ ಆಗದವರು ಯಾರಾದರೂ ಇದ್ದಾರ ಹೇಳಿ..? ಶಿವಣ್ಣ ಡ್ಯಾನ್ಸ್ ಗೆ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ಅದೆಷ್ಟೋ ಕಲಾವಿದರು ಶಿವಣ್ಣ ಜೊತೆಗೆ ಡ್ಯಾನ್ಸ್ ಮಾಡುವ ಆಸೆ ಹೊಂದಿರುತ್ತಾರೆ.
ಇದೀಗ ಇಂತಹ ಆಸೆ ನಟಿ ಶ್ರದ್ಧಾ ಶ್ರೀನಾಥ್ ಪಾಲಿಗೆ ಈಡೇರಿದೆ, ನಟಿ ಶ್ರದ್ಧಾ ಶ್ರೀನಾಥ್, ನಟ ಶಿವರಾಜ್ ಕುಮಾರ್ ಜೊತೆಗೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ‘ರುಸ್ತುಂ’ ಸಿನಿಮಾದಲ್ಲಿ ಶಿವಣ್ಣನಿಗೆ ಶ್ರದ್ಧಾ ನಾಯಕಿಯಾಗಿದ್ದಾರೆ. ಸದ್ಯ, ಹಾಡಿನ ಚಿತ್ರೀಕರಣದ ಫೋಟೋವನ್ನು ನಿರ್ದೇಶಕ ರವಿವರ್ಮ ಹಂಚಿಕೊಂಡಿದ್ದಾರೆ.
ಸಿನಿಮಾದಲ್ಲಿ ಶಿವಣ್ಣನ ಲುಕ್ ಸೂಪರ್ ಆಗಿದೆ. ಶಿವಣ್ಣ ಹಾಗೂ ಶ್ರದ್ಧಾ ಕಾಂಬಿನೇಶನ್ ಸಹ ಹೊಸದಾಗಿ ಕಾಣುತ್ತಿದೆ. ಸ್ಟೈಲಿಶ್ ಲುಕ್ ಜೊತೆಗೆ ಹಾಡಿನಲ್ಲಿ ಇಬ್ಬರೂ ಮಿಂಚಿದ್ದಾರೆ. ರುಸ್ತುಂ’ ಸಿನಿಮಾದಲ್ಲಿ ಮೂರು ನಾಯಕಿಯರು ಇದ್ದಾರೆ. ಶ್ರದ್ಧಾ, ರಚಿತಾ ರಾಮ್ ಹಾಗೂ ಮಯೂರಿ ಸಿನಿಮಾದಲ್ಲಿ ಕಾಣಸಿಕೊಂಡಿದ್ದಾರೆ. ಸಿನಿಮಾದ ಹಾಡುಗಳು ಸದ್ಯದಲ್ಲಿಯೇ ಬಿಡುಗಡೆ ಆಗಲಿವೆ. ರವಿವರ್ಮ ಚಿತ್ರದ ನಿರ್ದೇಶನ ಮಾಡಿದ್ದು, ಜಯಣ್ಣ ಕಂಬೈನ್ಸ್ ನಲ್ಲಿ ಚಿತ್ರ ನಿರ್ಮಾಣ ಆಗಿದೆ. ಚಿತ್ರೀಕರಣ ಆರಂಭವಾದ ದಿನದಿಂದ ಒಂದಲ್ಲ ಒಂದು ವಿಶೇಷ ಸುದ್ದಿಯನ್ನು ನೀಡುತ್ತಿರುವ ರುಸ್ತುಂ ಚಿತ್ರತಂಡ ಶ್ರದ್ಧಾ ಶ್ರೀನಾಥ್ ಮತ್ತು ಶಿವರಾಜ್ ಕುಮಾರ್ ಫೋಟೋಗಳನ್ನು ಟ್ವಿಟರ್ ನಲ್ಲಿ ಬಿಡುವುದರ ಮೂಲಕ ಶಿವಣ್ಣನ ಅಭಿಮಾನಿಗಳಲ್ಲಿ ಚಿತ್ರದ ಮೇಲೆ ಇನ್ನಷ್ಟು ಕುತೂಹಲ ಹೆಚ್ಚುವಂತೆ ಮಾಡಿದೆ,
ಅಲ್ಲದೆ ಇಷ್ಟುದಿನ ಸಾಹಸ ನಿರ್ದೇಶಕನಾಗಿದ್ದ ರವಿವರ್ಮ ರುಸ್ತುಂ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಡುತ್ತಿದ್ದಾರೆ.