ಮಾದಕ ತಾರೆ ಸನ್ನಿ ಲಿಯೋನ್ ತಮ್ಮ ಫೇವರಿಟ್ ಕ್ರಿಕೆಟಿಗನ ಹೆಸರು ಬಹಿರಂಗ ಪಡಿಸಿದ್ದಾರೆ. ಸನ್ನಿಗೆ ಧೋನಿ ಅಚ್ಚು ಮೆಚ್ಚು. ಇದಕ್ಕೆ ಕಾರಣ
ಎಂ.ಎಸ್.ಧೋನಿ ಏಕದಿನ ನಾಯಕತ್ವದಿಂದ ಕೆಳಗಿಳಿದ ವರ್ಷಗಳೇ ಉರುಳಿದೆ. ಇನ್ನು ಸತತ ಕ್ರಿಕೆಟ್‌ನಿಂದಲೂ ದೂರವಿದ್ದಾರೆ. ಇದೀಗ ಬಾಲಿವುಡ್ ಮಾದಕ ತಾರೆ ಸನ್ನಿ ಲಿಯೋನ್ ತಮ್ಮ ನೆಚ್ಚಿನ ಕ್ರಿಕೆಟಿಗ ಎಂ.ಎಸ್.ಧೋನಿ ಎಂದಿದ್ದಾರೆ.
ಎಂ.ಎಸ್.ಧೋನಿ ಕೌಟುಂಬಿಕ ವ್ಯಕ್ತಿ. ಧೋನಿ ಸರಳತೆ ಎಲ್ಲರಿಗೂ ಮಾದರಿ. ಝಿವಾ ಧೋನಿ ತುಂಬಾ ಮುದ್ದಾಗಿದ್ದಾರೆ. ಕ್ರಿಕೆಟಿಗರಲ್ಲಿ ಧೋನಿಯೇ ನನ್ನ ಅಚ್ಚು ಮೆಚ್ಚು ಎಂದು ಸನ್ನಿ ಲಿಯೋನ್ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ದದ ಆರಂಭಿಕ 3 ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಧೋನಿ,
ಇದೀಗ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಬಳಿಕ 2019ರ ವಿಶ್ವಕಪ್ ಟೂರ್ನಿಯಲ್ಲಿ ಆಡಲಿದ್ದಾರೆ. ಇತ್ತ ಸನ್ನಿ ಲಿಯೋನ್ ಕೂಡ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ.