ಈಶ್ವರಪ್ಪನಿಗೆ ಬ್ರೈನ್​ಗೂ ಬಾಯಿಗೂ ಲಿಂಕ್ ತಪ್ಪಿದೆ ಎಂದ ಮಾಜಿ ಮುಖ್ಯಮಂತ್ರಿ..!

admin
By admin
1 Min Read

ಬಿಜೆಪಿಯ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್​ ಈಶ್ವರಪ್ಪನಿಗೆ ಬ್ರೈನ್​ಗೂ ಬಾಯಿಗೂ ಲಿಂಕ್​ ತಪ್ಪೋಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಲ್ಪತರು ನಾಡು ಎಂದು ಪ್ರಸಿದ್ಧವಾಗಿರುವ ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಪರ ಪ್ರಚಾರ ಮಾಡಿದ ಸಿದ್ದರಾಮಯ್ಯ ಅವರು ಮಾಮೂಲಿಯಂತೆ ಬಿಜೆಪಿ ವಿರುದ್ಧ ಕೆಂಡಾಮಂಡಲರಾಗಿ ಮಾತನಾಡಿದರು. ಕೆಎಸ್​ ಈಶ್ವರಪ್ಪ ವಿರುದ್ಧವಂತೂ ಭಾರೀ ಕಿಡಿಕಾರಿದರು.
ಈಶ್ವರಪ್ಪನಿಗೆ ಬ್ರೈನ್​ಗೆ ಬಾಯಿಗೆ ಲಿಂಕ್​ ತಪ್ಪೋಗಿದೆ ಎಂದರು. ಒಬ್ಬನೇ ಒಬ್ಬ ಕುರುಬರಿಗೆ ಟಿಕೆಟ್​ ಕೊಡಿಸೋ ಯೋಗ್ಯತೆ ಇಲ್ಲದ ಈಶ್ವರಪ್ಪ ಬಿಜೆಪಿ ಬಿಟ್ಟು ಸನ್ಯಾಸತ್ವ ಸ್ವೀಕರಿಸಲು ಎಂದು ಟಾಂಗ್ ನೀಡಿದರು.
ಗುರು ದೇವೇಗೌಡರ ಮೇಲಿನ ಹಿಂದಿನ ಕೋಪ-ತಾಪ ಎಲ್ಲಾ ಬಿಟ್ಟು ಅವರ ಪರವಾಗಿ ಮತ ಯಾಚನೆ ಮಾಡಿ ಸಿದ್ದರಾಮಯ್ಯ ಗಮನ ಸೆಳೆದರು.

Share This Article