ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಕಾಲಿಡುವ ಮೂಲಕ ‘ಜರ್ಸಿ’ ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ತೊಡಗಿರುವ ನಟಿ ಶ್ರದ್ಧಾ ಶ್ರೀನಾಥ್ ಅಲ್ಲಿನ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡುತ್ತಿದ್ದಾರೆ
ಹೀಗೆ ನಡೆದ ಒಂದು ಸಂದರ್ಶನದಲ್ಲಿ ‘ನಟ ಯಶ್ ಅಥವಾ ನಟ ನಾನಿ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾರು ?’ ಎನ್ನುವ ಪ್ರಶ್ನೆ ಬಂತು ಪತ್ರಕರ್ತರ ಕಡೆಯಿಂದ ಬಂತು, ಆದರೆ, ಈ ಪ್ರಶ್ನೆಗೆ ತುಂಬಾ ಬುದ್ದಿವಂತಿಕೆಯಿಂದ ನಟಿ ಶ್ರದ್ಧಾ ಶ್ರೀನಾಥ್ ಉತ್ತರ ನೀಡಿದ್ದಾರೆ
”ಒಬ್ಬ ಸ್ಟಾರ್ ಆಗಿ ನಾನು ನಾನಿ ಅವರ ಜೊತೆಗೆ ಕೆಲಸ ಮಾಡಿದ್ದೇನೆ ‘ಯಶ್ ಅವರನ್ನು ನಾನು ಒಮ್ಮೆ ಮಾತ್ರ ಭೇಟಿ ಮಾಡಿದ್ದೇನೆ ವೈಯಕ್ತಿಯವಾಗಿ ಅವರ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ ಹಾಗಾಗಿ ನಾನು ನಾನಿರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಆದರೆ ಯಶ್ ಕೂಡ ಕಷ್ಟ ಪಟ್ಟು ಬೆಳೆದು ಬಂದ ನಟ.
ಟಿವಿ ಸೀರಿಯಲ್ ನಿಂದ ಕಷ್ಟ ಪಟ್ಟ ಅವರ ಕಥೆ ನನಗೆ ನೆನಪಿದೆ. ಅವರು ಕನ್ನಡ ಸಿನಿಮಾ ಏನು ಎಂದು ಇಡೀ ದೇಶಕ್ಕೆ ತೋರಿಸಿದರು.” ಎನ್ನುವ ಮೂಲಕ ನಿರೂಪಕಿಯ ಪ್ರಶ್ನೆಯ ಬುದ್ದಿವಂತಿಕೆಯ ಉತ್ತರ ನೀಡಿದ್ದಾರೆ.