ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದೆ ಕನ್ನಡ ಕಿರಿಕ್ ಪಾರ್ಟಿ ಯಶಸ್ಸಿನ ನಂತರ ರಶ್ಮಿಕಾ ಮಂದಣ್ಣ ತಮ್ಮ ಯಶಸ್ಸಿನ ಹಾದಿಯನ್ನು ಮುಂದುವರಿಸಿಕೊಂಡು ಹೋಗುತ್ತಲೇ ಇದ್ದಾರೆ ಕನ್ನಡ ಚಿತ್ರಗಳನ್ನು ಹೊರತುಪಡಿಸಿ ಪರಭಾಷೆಗೂ ಕಾಲಿಟ್ಟ ಈ ಬೆಡಗಿ ಹಿಂತಿರುಗಿ ನೋಡಲೇ ಇಲ್ಲ.
ಕನ್ನಡದ ಸ್ಟಾರ್ ನಟರಾದ ರಕ್ಷಿತ್ ಶೆಟ್ಟಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಿಲೀಸ್ ಗೆ ರೆಡಿಯಾಗಿರುವ ಪೊಗರು ಚಿತ್ರದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜ ಜೊತೆಗೆ ನಟಿಸಿದ್ದು ಆಗಿದೆ.
ಇಷ್ಟೇ ಅಲ್ಲದೆ ತೆಲುಗಿನ ಸೂಪರ್ ಸ್ಟಾರ್ ಗಳಾದ ವಿಜಯ್ ದೇವರಕೊಂಡ, ನಾನಿ, ನಾಗಾರ್ಜುನ ಜೊತೆ ನಟಿಸಿರುವ ರಶ್ಮಿಕಾ ಅಲ್ಲು ಅರ್ಜುನ್ ಜೊತೆ ನಟಿಸುವುದು ಈಗಾಗಲೇ ಕನ್ಫರ್ಮ್ ಆಗಿದೆ ಇದರ ಬೆನ್ನಿಗೆ ಇದೀಗ ರಶ್ಮಿಕಾ ಹೊಸ ಸುದ್ದಿಯನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ.
ಹೌದು ತೆಲುಗಿನ ಸೂಪರ್ ಸ್ಟಾರ್ ನಾಗಾರ್ಜುನ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ರಶ್ಮಿಕಾ ಇದೀಗ ಅವರ ಮಗ ಅಖಿಲ್ ಅಕ್ಕಿನೇನಿ ಅವರ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆಯಂತೆ ಎಲ್ಲಾ ಅಂದುಕೊಂಡಂತೆ ಆದರೆ ಡೇಟ್ಸ್ ಹೊಂದಾಣಿಕೆಯಾದರೆ ಅಖಿಲ್ ಮುಂದಿನ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಆಗೋದು ಪಕ್ಕಾ.
ಅಖಿಲ್ ಅಕ್ಕಿನೇನಿ ಅವರ ಈ ಚಿತ್ರಕ್ಕೆ ಈ ಹಿಂದೆ ಪೂಜಾ ಹೆಗಡೆ, ಕೈರಾ ಅಡ್ವಾಣಿ, ಆಲಿಯಾ ಭಟ್ ಹೀಗೆ ಹಲವು ಸ್ಟಾರ್ ನಟಿಯರ ಹೆಸರುಗಳು ಕೇಳಿ ಬಂದಿದ್ದವು ಆದರೆ ನಿರ್ದೇಶಕರಿಗೆ ಈ ಸ್ಟಾರ್ ನಟಿಯರು ಈ ಪಾತ್ರಕ್ಕೆ ಹೊಂದಾಣಿಕೆ ಆಗದೇ ಇದ್ದ ಕಾರಣ ಇದೀಗ ರಶ್ಮಿಕಾ ಕನ್ಫರ್ಮ್ ಎಂದು ಹೇಳಲಾಗುತ್ತದೆ.
ಒಟ್ಟಾರೆ ಕನ್ನಡ ಚಿತ್ರಗಳಿಗಿಂತ ಹೆಚ್ಚಾಗಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಬಿಜಿಯಾಗಿದ್ದಾರೆ.