ಶರಾವತಿ ಫಿಲ್ಮ್ಸ್ ಹಾಗೂ ಎಸ್ ಎನ್ ಎಸ್ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ಎಸ್.ಸಂದೀಪ್ ಕುಮಾರ್ ಹಾಗೂ ನಟರಾಜ್ ಹಳೇಬೀಡು ಯು.ಎಸ್.ಎ ನಿರ್ಮಾಣದಲ್ಲಿ ಮೂಡಿಬಂದಿರುವ ರತ್ನಮಂಜರಿ ಚಿತ್ರ ಈಗ ರಾಜ್ಯಾದ್ಯಂತ ಸುದ್ಧಿಯಲ್ಲಿರುವ ಸೆನ್ಸೇಷನ್ ಈ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡು ಎಲ್ಲೆಡೆ ಅದ್ಭುತ ಪ್ರತಿಕ್ರಿಯೆಯನ್ನು ಪಡೆದು ಕೊಳ್ಳುತ್ತಿದೆ.
ಇನ್ನು ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ ರಾಜ್ ಚರಣ್ ಹಾಗೂ ಆಖಿಲಾ ಪ್ರಕಾಶ್ ಚಿತ್ರಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ.ನಾಗತಿಹಳ್ಳಿ ರವರ ಗರಡಿಯಲ್ಲಿ ಪಳಗಿರುವ ಈ ಯುವ ನಟರು ” ರತ್ನಮಂಜರಿ ” ಚಿತ್ರದಲ್ಲಿ ನಾಯಕ- ನಾಯಕಿಯಾಗಿ ತಮ್ಮ ಪಾತ್ರ ಜೀವ ತುಂಬಿದ್ದಾರೆ ಇನ್ನು ಕೊಡಗಿನ ಪೃಕೃತಿ ಸೌಂದರ್ಯವನ್ನು ಪ್ರೀತಮ್ ತಗ್ಗಿನಮನೆ ರವರ ಕ್ಯಾಮೆರಾ ಅಮೋಘವಾಗಿ ಸೆರೆಹಿಡಿದಿರುವ ರೀತಿ ಪ್ರೇಕ್ಷಕನ ಮನಸೆಳೆಯೋದು ಖಂಡಿತಾ ಚಿತ್ರದ ಹಾಡುಗಳು ಈಗಾಗಲೇ ಯೂಟ್ಯೂಬ್ ನಲ್ಲಿ ವೀಕ್ಷಕರಿಂದ ಶಾಬ್ಬಾಸ್ ಗಿರಿಯನ್ನು ಪಡೆದಿವೆ ,
ಹಾಗೆಯೇ ಚಿತ್ರದ ಹಿನ್ನೆಲೆ ಸಂಗೀತ ಚಿತ್ರ ನೋಡಿ ಹೊರಗೆ ಬಂದ ಮೇಲೂ ನಿಮ್ಮನ್ನು ಕಾಡುವುದು ಸುಳ್ಳಲ್ಲ. ಹರ್ಷವರ್ಧನ್ ರಾಜ್ ರವರ ಸಂಗೀತ ಚಿತ್ರದಲ್ಲಿ ಮಹತ್ವದ ಪಾತ್ರ ನಿಭಾಯಿಸಿದೆ.ನಿಂತ ನೀರಿನಂತೆ ಒಂದೇ ತರಹದ ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆಯಾಗುತಿದ್ದವು , ರತ್ನಮಂಜರಿ ಚಿತ್ರ ಚಂದನವನದಲ್ಲಿ ಬದಲಾವಣೆಯ ಗಾಳಿಯಂತೆ ಬೀಸಿದೆ.ಚಿತ್ರವನ್ನು ನೋಡಲೇಬೇಕಾದ ಇನ್ನೊಂದು ಮುಖ್ಯ ಅಂಶವೇನೆಂದರೆ,
ಚಿತ್ರ ನೈಟಘಟನೆಯಾಧಾರಿತ ದ್ದಾಗಿದೆ.ಸಿನಿಪ್ರಿಯರಿಗೆ ಈ ಚಿತ್ರ ತಾಜಾ ಅನುಭವವನ್ನು ನೀಡುವುದು ಮಾತ್ರವಲ್ಲದೆ, ಈ ಮಾದರಿಯ ಚಿತ್ರಗಳು ಕನ್ನಡದಲ್ಲಿ ಇನ್ನೂ ಹೆಚ್ಚೆಚ್ಚು ಬಿಡುಗಡೆಯಾಗಲಿ ಎಂಬ ತುಡಿತವನ್ನು ಹೆಚ್ಚು ಮಾಡುವುದು ಸುಳ್ಳಲ್ಲ.ಯುವ ತಂಡ ಸೇರಿಕೊಂಡು, ಯಾವುದೇ ಅನುಭವಿ ತಂಡಕ್ಕಿಂತ ನಾವೇನು ಕಮ್ಮಿಯಿಲ್ಲ ಎಂಬಂತೆ ನಿರ್ಮಿಸಿರುವ ಚಿತ್ರಕೌತುಕ ಭರಿತ ರಹಸ್ಯವನ್ನು ನೀವು ತಿಳಿಯಬೇಕೆಂದರೆ ಚಿತ್ರವನ್ನು ತಪ್ಪದೇ ಚಿತ್ರಮಂದಿರಗಳಲ್ಲಿ ನೋಡಲೇಬೇಕು.
ಮರ್ಡರ್ ಮಿಸ್ಟರಿ ಎಂದರೆ ಅಲ್ಲಿ ಕೇವಲ ಕ್ಯೂರಿಯಾಸಿಟಿ, ಸೀರ್ಯಸ್ ನೋಟ್ ಗಳಷ್ಟೇ ಇರುತ್ತದೆ ಎಂದು ಊಹಿಸಬಹುದು. ಈಗಾಗಲೇ ಬಂದಿರುವ ಬಹಳಷ್ಟು ಸಿನಿಮಾಗಳಲ್ಲಿ ಅಂತಹುಗಳೇ ಇರುವಂತದ್ದು. ಆದರೆ ಹೊಸಬರ ರತ್ನಮಂಜರಿ ಮರ್ಡರ್ ಮಿಸ್ಟರಿ ಸಿನಿಮಾವಾಗಿದ್ದರೂ ಸಹ ಸಂಪೂರ್ಣ ಮರ್ಡರ್ ಮಿಸ್ಟರಿ ಜಾನರ್ ಗೆ ತಗುಲಿಕೊಳ್ಳದೇ ಪ್ರೇಕ್ಷಕರು ಚಕಿತಗೊಳಿಸುವ ಸಾಕಷ್ಟು ಸೀಕ್ರೆಟ್ ಗಳನ್ನು ರತ್ನಮಂಜರಿ ಹೊಂದಿರುವುದು ವಿಶೇಷ. ಅಲ್ಲದೇ ಕಾಮಿಡಿ ಕಿಂಗ್ ಸಾಧುಕೋಕಿಲಾ ರತ್ನಮಂಜರಿಯಲ್ಲಿ ಅಭಿನಯಿಸಿದ್ದು, ಅವರಿದ್ದ ಕಡೆ ಕಾಮಿಡಿಗೆ ಬರವೆಲ್ಲಿಂದ ಬಂತು. ಇನ್ನೂ ಮೇಲಾಗಿ ಕಾಮಿಡಿಯ ಜತೆಗೆ ರತ್ನಮಂಜರಿಯಲ್ಲಿ ಸೆಂಟಿಮೆಂಟ್ ಇದೆ. ರೊಮ್ಯಾನ್ಸ್ ಇದೆ. ಫೈಟ್ಸ್ ಇದೆ. ಡ್ಯಾನ್ಸ್ ಕೂಡ ಇದೆ. ಮನರಂಜನೆಯನ್ನು ಬಯಸಿ ಥಿಯೇಟರ್ ಗೆ ಬರುವ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿ ಮಾಡದೇ ರತ್ನಮಂಜರಿ ತಯಾರಾಗಿರುವುದು ಪ್ಲಸ್ ಪಾಯಿಂಟ್ ಆಗಿದೆ.