ಶರಾವತಿ ಫಿಲ್ಮ್ಸ್ ಹಾಗೂ ಎಸ್.ಎನ್.ಎಸ್ ಸಿನಿಮಾಸ್ ಯು.ಎಸ್.ಎ ಬ್ಯಾನರ್ ನಡಿಯಲ್ಲಿ ಹಾಗೂ ಎಸ್.ಸಂದೀಪ್ ಕುಮಾರ್ ಹಾಗೂ ನಟರಾಜ್ ಹಳೇಬೀಡು ಯು.ಎಸ್.ಎ. ಜಂಟಿ ನಿರ್ಮಾಣದಲ್ಲಿ ಮೂಡಿಬಂದಿರುವ ಅದ್ಭುತ ಚಿತ್ರ ರತ್ನಮಂಜರಿ.ನಿಗೂಢ ಸಾವಿನ ಬೆನ್ನತ್ತಿ ಹೋಗುವ ಕುತೂಹಲ ಭರಿತ ಸಸ್ಪೆನ್ಸ್ ಥ್ರಿಲ್ಲರ್ ರತ್ನಮಂಜರಿ ಚಿತ್ರ ರಾಜ್ಯಾದ್ಯಂತ ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ.
ನಿರ್ದೇಶಕ ಪ್ರಸಿದ್ದ್ ಚಿತ್ರವನ್ನು ಪ್ರೇಕ್ಷಕರಿಗೆ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.
ಸಸ್ಪೆನ್ಸ್ ಥ್ರಿಲ್ಲರ್ ವಿನಿರೀಕ್ಷಿತ ಕನ್ನಡಕ್ಕೊಂದು ಹೊಸ ಪ್ರಯತ್ನದಂತೆ ಮೂಡಿಬಂದಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ.
ಹಾಗೂ ಚಿತ್ರದ ನೈಜತೆಗೆ ಎಂತಹವರನ್ನಾದರೂ ಸೆಳೆಯುವ ಸಾಮರ್ಥ್ಯವಿದೆ.
ಚಿತ್ರದ ನಾಯಕ- ನಾಯಕಿಯಾಗಿ ರಾಜ್ ಚರಣ್ ಹಾಗೂ ಅಖಿಲಾ ಪ್ರಕಾಶ್ ತಮ್ಮ ಅನುಭವಕ್ಕೂ ಮೀರಿದ ನಟನೆಯನ್ನು ತೋರ್ಪಡಿಸಿದ್ದಾರೆ .
ಇಬ್ಬರ ಕಾಂಬಿನೇಷನ್ ಕೂಡ ಪ್ರೇಕ್ಷಕರಿಗೆ ಇಷ್ಟವಾಗಿದೆ. ಯುವ ತಂಡದ ಈ ಪ್ರಯತ್ನಕ್ಕೆ ಎಲ್ಲಾ ವಿಮರ್ಶಕರು ಹಾಗೂ ಎಲ್ಲಾ ವೀಕ್ಷಕರು ಶಾಬ್ಬಾಸ್ ಎಂದು ಬೆನ್ನು ತಟ್ಟಿದ್ದಾರೆ.
ಚಿತ್ರದ ಸಸ್ಪೆನ್ಸ್ ನ್ನು ಕೊನೆಯವರೆಗೂ ಕಾಯ್ದುಕೊಂಡು ಹೋದಂತಹ ರೀತಿ ಪ್ರತಿಯೊಬ್ಬ ವೀಕ್ಷಕನಿಗೂ ಇಷ್ಟ ಆಗುವಂತಹ ಅಂಶ.
ಬುಕ್ ಮೈ ಶೋ ನಲ್ಲಿ ಕೂಡ ಚಿತ್ರಕ್ಕೆ 85% ಗೂ ಅಧಿಕ ರೇಟಿಂಗ್ ಸಿಕ್ಕಿದೆ.
ಅಲ್ಲದೇ ಪ್ರೇಕ್ಷಕರು ಮತ್ತೊಮ್ಮೆ ಮಗದೊಮ್ಮೆ ಚಿತ್ರವನ್ನು ನೋಡಲು ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ.
ಚಿತ್ರದ ಕಥೆ ನೈಜಘಟನೆಯಾಧಾರಿತವೆಂಬುದು ಪ್ರೇಕ್ಷಕನನ್ನು ಪ್ರತಿಯೊಂದು ದೃಶ್ಯದಲ್ಲೂ ಸೀಟಿನ ತುದಿಯಲ್ಲಿ ಕೂರುವಂತೆ ಮಾಡುತ್ತದೆ.
ಒಟ್ಟಾರೆಯಾಗಿ ರತ್ನಮಂಜರಿ ಚಿತ್ರ ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಪ್ರಾಮಾಣಿಕ ಪ್ರಯತ್ನದ ಫಲವಾಗಿದೆ.