ಕೆಜಿಎಫ್​ನಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸೋಕೆ ಬರ್ತಿದ್ದಾರಂತೆ ಬಾಲಿವುಡ್ ಟಾಪ್ ನಟಿ..!

Date:

ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿತ್ತು. ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾ ಕನ್ನಡ ಸಿನಿಮಾ ರಂಗಕ್ಕೆ ಹೊಸ ಭಾಷ್ಯವನ್ನು ಬರೆದಿತ್ತು. ಪ್ರಶಾಂತ್ ನೀಲ್ ಮತ್ತು ಟೀಮ್ ಕೆಜಿಎಫ್ ಚಾಪ್ಟರ್ 2 ಅನ್ನು ಆರಂಭಿಸಿದೆ.
ಕೆಜಿಎಫ್-2 ಚಿತ್ರೀಕರಣ ಶುರುವಾಗಿದೆ. ಸ್ವಲ್ಪ ದಿನ ಶೂಟಿಂಗ್ ನಿಂದ ದೂರ ಉಳಿದಿದ್ದ ನಟ ಯಶ್ ಜೂನ್ 6ರಿಂದ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕೆಜಿಎಫ್​ಗೆ ತಂಡವನ್ನು ಬಾಲಿವುಡ್​ ಟಾಪ್ ನಟಿಯೊಬ್ಬರು ಸೇರಿಕೊಳ್ಳಲಿದ್ದಾರೆ. 10 ವರ್ಷದ ಹಿಂದೆ ತೆರೆಕಂಡಿದ್ದ ರಿಯಲ್ ಸ್ಟಾರ್ ಉಪೇಂದ್ರ ನಟನೆ ಹಾಗೂ ನಿರ್ದೇಶನನ ‘ಉಪೇಂದ್ರ’ ಸಿನಿಮಾದಲ್ಲಿ ನಟಿಸಿದ್ದ ರಮೀನಾ ಟಂಡನ್ ಕೆಜಿಎಫ್​ ನಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್ ವಿತರಣೆಯನ್ನು ಟಂಡನ್ ಅವರ ಪತಿ ಅನಿಲ್ ತಡಾನಿ ಮಾಡಿದ್ದರು. ಅವರು ಕೆಜಿಎಫ್ 2 ವಿತರಣೆಯನ್ನೂ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ರವೀನಾ ಟಂಡನ್ ಸಹ ನಟಿಸುತ್ತಿದ್ದಾರಂತೆ.


ರವಿನಾ ಟಂಡನ್ ಇಂದಿರಾ ಗಾಂಧಿ ಅವರನ್ನು ಹೋಲುವ ಪಾತ್ರ ಮಾಡಲಿದ್ದಾರೆ ಎಂದು ವರದಿಯಾಗಿದೆ. 1970-80ರ ದಶಕದ ಪ್ರಧಾನಿ ಕ್ಯಾರೆಕ್ಟರ್ ಅಂದರೆ ಆಗ ನಮ್ಮ ಪ್ರಧಾನಿ ಆಗಿದ್ದವರು ಇಂದಿರಾ ಅವರೇ. ಹೀಗಾಗಿ ರವೀನಾ ಇಂದಿರಾ ಅವರಂಥಾ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕೆಜಿಎಫ್ ಈಗಾಗಲೇ ಸಖತ್ ಸದ್ದು ಮಾಡ್ತಾ ಇದ್ದು, ರವೀನಾ ಟಂಡನ್ ಆಗಮನ ಇನ್ನೂ ಹೈಪ್ ಕ್ರಿಯೇಟ್ ಮಾಡಲಿದೆ.‌ಸಂಜತ್ ದತ್ ಕೂಡ ನಟಿಸ್ತಾ ಇದೆ. ಹೀಗಾಗಿ ಮತ್ತೊಂದು ದಾಖಲೆ‌ ನಿರ್ಮಾಣವಾಗಲಿದೆ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...