ಸ್ಯಾಂಡಲ್ ವುಡ್ ನಲ್ಲಿ ಹವಾ ಸೃಷ್ಠಿಸಿದ್ದ ಸುಪರ್ ಹಿಟ್ ಚಿತ್ರ ಟಗರು ಸಿನಿಮಾ ಮೂಲಕ ಕಾನ್ಸ್ ಟೇಬಲ್ ಸರೋಜಾ ಪಾತ್ರದಲ್ಲಿ ನಟಿಸಿ ಎಲ್ಲರ ಮನ ಗೆದ್ದಿದ್ದ ನಟಿ ತ್ರಿವೇಣಿ ರಾವ್ ಸಕಲೇಶಪುರದಲ್ಲಿ ನಡೆಯುತ್ತಿದ್ದ ‘ಅಲ್ಲೆ ಡ್ರಾ ಅಲ್ಲೆ ಬಹುಮಾನ’ ಚಿತ್ರದ ಶೂಟಿಂಗ್ ವೇಳೆ ಹಠಾತ್ ಆಗಿ ಕುಸಿದು ಬಿದ್ದ ಘಟನೆ ಇದೀಗ ಬೆಳಕಿಗೆ ಬಂದಿದೆ.
‘ಅಲ್ಲೆ ಡ್ರಾ ಅಲ್ಲೆ ಬಹುಮಾನ’ ಚಿತ್ರದ ಚಿತ್ರೀಕರಣವನ್ನ ಸಕಲೇಶಪುರದಲ್ಲಿ ಮಾಡಲಾಗುತ್ತಿತ್ತು ಇದು ಹಾರರ್ ಕಥೆಯನ್ನ ಹೊಂದಿರುವ ಚಿತ್ರವಾಗಿದ್ದರಿಂದ ಚತ್ರದ ಸೆಟ್ ನಲ್ಲಿ ಅಂತಹುದೇ ಘಟನೆಯೊಂದು ನಡೆದು ಎಲ್ಲರೂ ಭಯಭೀತರಾಗುವಂತೆ ಮಾಡಿದೆ..!
ಕಾನ್ಸ್ ಟೇಬಲ್ ಸರೋಜಾ ಖ್ಯಾತಿಯ ನಟಿ ತ್ರಿವೇಣಿ ‘ಅಲ್ಲೆ ಡ್ರಾ ಅಲ್ಲೆ ಬಹುಮಾನ’ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದು ಚಿತ್ರೀಕರಣದ ವೇಳೆ ಪ್ರಜ್ಞೆ ತಪ್ಪಿ ಬಿದ್ದು ವಿಚಿತ್ರವಾಗಿ ನಡೆದುಕೊಂಡರು ಎನ್ನುವ ವಿಡಿಯೋ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಶಾಗಿದೆ ಇದಕ್ಕೆ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ, ಆದರೆ ಇದನ್ನು ಕೆಲವರು ಪ್ರೇತ ಕಾಟ ಇರಬಹುದು ಎಂದು ಹೇಳುತ್ತಿದ್ದರೆ ಇನ್ನು ಕೆಲವರು ಹಾಗೆಲ್ಲ ಏನೂ ಇಲ್ಲ ಅವರು ತುಂಬಾ ದಣಿದಿದ್ದರು ಎಂದು ಹೇಳುತ್ತಿದ್ದಾರೆ.
ಒಟ್ಟಾರೆ ಸಾಕಷ್ಟು ಊಹಾಪೋಹಗಳು ಇದರ ಸುತ್ತ ಹರಿದಾಡುತ್ತಿದ್ದು ಇದಕ್ಕೆ ಚಿತ್ರತಂಡವೇ ಉತ್ತರ ನೀಡಬೇಕಿದೆ.
ಇನ್ನುಳಿದಂತೆ ಈ ಹಾರರ್ ಚಿತ್ರದಲ್ಲಿ ಶೌರ್ಯ ನಾಯಕನಾಗಿ ನಟಿಸುತ್ತಿದ್ದು ಸತೀಶ್ ಅವರ ಛಾಯಾಗ್ರಹಣ, ವಿಜಯ್ ರಾಜ್ ಸಂಗೀತ, ಬಿಜಿ ಪ್ರಶಾಂತ್ ನಿರ್ಮಾಣ ಚಿತ್ರಕ್ಕಿದೆ.