ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎಂಎಸ್ ಧೋನಿ ಭಾರತೀಯ ಆರ್ಮಿ ಚಿಹ್ನೆಯಿದ್ದ ಗ್ಲೌಸ್ ಧರಿಸಿದ್ದರು ಈ ಚಿಹ್ನೆಯಿರುವ ಗ್ಲೌಸ್ ಧರಿಸದಂತೆ ಧೋನಿಗೆ ಐಸಿಸಿ ಹೇಳಿತ್ತು. ಆದರೆ ಇದೀಗ ಧೋನಿ ಬೆಂಬಲಕ್ಕೆ ನಿಂತ ಭಾರತೀಯರು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನವನ್ನೇ ಆರಂಭಿಸಿದ್ದಾರೆ.

ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ಸೌತಾಂಪ್ಟನ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ವಿಕೆಟ್ ಕೀಪರ್ ಧೋನಿ ಅವರು ವಿಶೇಷ ಗ್ಲೌಸ್ ಧರಿಸಿದ್ದರು, ಈ ಗ್ಲೌಸಿನಲ್ಲಿ ಭಾರತೀಯ ವಿಶೇಷ ಪ್ಯಾರಾ ಸೇನಾಪಡೆಯ ‘ಬಲಿದಾನ್’ ಮುದ್ರೆ ಇತ್ತು ಆದರೆ ಇದು ನಿಯಮ ಉಲ್ಲಂಘನೆಯಾಗುತ್ತದೆ ಎಂದು ಪಾಕಿಸ್ತಾನ ನೀಡಿದ ದೂರಿನ ಅನ್ವಯ ಧೋನಿ ಗ್ಲೌಸ್ ನಿಂದ ಈ ಮುದ್ರೆ ತೆಗೆಯಬೇಕು ಎಂದು ಐಸಿಸಿ ಬಿಸಿಸಿಐ ಗೆ ಹೇಳಿತ್ತು.

ಇದಕ್ಕೆ ಸಂಭಂಧ ಪಟ್ಟಂತೆ ಇದೀಗ ಇಡೀ ದೇಶವೇ ಧೋನಿ ಬೆಂಬಲಕ್ಕೆ ನಿಂತಿದ್ದು ಬಿಸಿಸಿಐ ಈಗಾಗಲೇ ಧೋನಿ ಗ್ಲೌಸ್ ಬಳಕೆ ಮಾಡಲು ಐಸಿಸಿಗೆ ಪತ್ರ ಬರೆದಿದೆ, ಧೋನಿ ಬಳಸಿರುವ ಗ್ಲೌಸ್ ಮೇಲಿನ ಸೇನೆ ಚಿಹ್ನೆ ಯಾರನ್ನೂ ಪ್ರಚೋದಿಸುವಂತಿಲ್ಲ. ಇದರಲ್ಲಿ ವಾಣಿಜ್ಯ ಉದ್ದೇಶವೂ ಇಲ್ಲ. ಹೀಗಾಗಿ ಐಸಿಸಿ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಬಿಸಿಸಿಐ COA ವಿನೋದ್ ರೈ ಹೇಳಿದ್ದಾರೆ.

ಇದರ ಬೆನ್ನಲ್ಲೆ ಮತ್ತೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಭಿಯಾನವನ್ನೇ ಆರಂಭಿಸಿದ್ದಾರೆ. ನೀವೊಬ್ಬರು ಪ್ಯಾರಾ ರೆಜಿಮೆಂಟ್ ಅಧಿಕಾರಿ ಆ ಗ್ಲೌಸನ್ನು ತೆಗೆಯಬೇಡಿ ‘ಬಲಿದಾನ’ ನಮ್ಮ ಗೌರವದ ಚಿಹ್ನೆ. ಅದು ನಮ್ಮ ಭಾರತೀಯ ಸೇನೆಯ ಹೆಮ್ಮೆಯ ದ್ಯೋತಕವೂ ಹೌದು.

ದೇಶವೇ ನಿಮ್ಮ ಬೆಂಬಲಕ್ಕಿದೆ ಎಂದು ಧೋನಿ ಬೆಂಬಲಿಸಿ ನಿವೃತ್ತ ಮೇಜರ್ ಗೌರವ್ ಆರ್ಯ ಟ್ವೀಟ್ ಮಾಡಿದ್ದರೆ ಸೇನೆಯ ಬಲಿದಾನದ ಚಿಹ್ನೆ ಬಳಸಿರುವ ಗ್ಲೌಸ್ ಬದಲಿಸುವಂತೆ ಐಸಿಸಿ ಸೂಚಿಸಿದ ಬೆನ್ನಲ್ಲೇ, ಎಲ್ಲರೂ ಧೋನಿ ಬೆಂಬಲಕ್ಕೆ ನಿಂತಿದ್ದಾರೆ.






