ಕೊನೆಗೂ ಬಳ್ಳಾರಿಗೆ ತೆರಳಲು ರೆಡ್ಡಿಗೆ ಸಿಕ್ಕಿದೆ ಅನುಮತಿ..!

Must read

ತವರೂರು ಬಳ್ಳಾರಿಗೆ ತೆರಳಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಮನವಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಜನಾರ್ದನ ರೆಡ್ಡಿ ಅವರು, ಬಳ್ಳಾರಿ ಪ್ರವೇಶಿಸದಂತೆ ನಿರ್ಭಂದವನ್ನು ಹೇರಲಾಗಿತ್ತು ಈ ಸಲುವಾಗಿ ತಮ್ಮ ಮೇಲೆ ಹೇರಿರುವ ನಿರ್ಬಂಧವನ್ನು ಸಡಿಲ ಮಾಡಬೇಕು ಎಂದುಮಾಜಿ ಸಚಿವ ಜನಾರ್ದನ ರೆಡ್ಡಿ ಮನವಿಯನ್ನು ಮಾಡಿಕೊಂಡಿದ್ದರು ಇದನ್ನು ಮಾನ್ಯ ಮಾಡಿರುವ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ನೇತೃತ್ವದ ನ್ಯಾಯಪೀಠ ಎರಡು ವಾರ ಬಳ್ಳಾರಿಗೆ ತೆರಳಲು ಇಂದು ಅನುಮತಿ ನೀಡಿದೆ,

ಆದರೆ ಈ ಭೇಟಿ ಸಮಯದಲ್ಲಿ ತಮ್ಮ ವಿರುದ್ಧದ ಸಾಕ್ಷ್ಯಗಳ ನಾಶಪಡಿಸುವ ಪ್ರಯತ್ನ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ಷರತ್ತು ವಿಧಿಸಲಾಗಿದೆ.

 

- Advertisement -spot_img

More articles

- Advertisement -spot_img

Latest article