ವಿಷ್ಣುವರ್ಧನ್, ಶಂಕರ್ ನಾಗ್ ಅವರನ್ನು ಕನ್ನಡಕ್ಕೆ ಪರಿಚಯಿಸಿದ್ದು ಕಾರ್ನಾಡ್..!

Date:

ಗಿರೀಶ್ ಕಾರ್ನಾಡ್ ಕನ್ನಡದ ಹಿರಿಯ ಸಾಹಿತಿ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆಯನ್ನು ಪದಗಳಲ್ಲಿ ವರ್ಣಿಸಲಾಗದು.
ನಾಟಕಕಾರರಾಗಿ, ಸಾಹಿತಿಯಾಗಿ, ಸಿನಿಮಾ ನಿರ್ದೇಶಕರಾಗಿಯೂ, ಸಿನಿಮಾ ನಟರಾಗಿಯೂ ಗಿರೀಶ್ ಕಾರ್ನಾಡರು ಅನನ್ಯ ಸೇವೆ ಸಲ್ಲಿಸಿದ್ದಾರೆ.
1970 ರಲ್ಲಿ ರಿಲೀಸ್ ಆದ ಸಂಸ್ಕಾರ ಸಿನಿಮಾದ ಮೂಲಕ ಅವರು ಸಿನಿಮಾ ಪಯಣ ಆರಂಭಿಸಿದರು. ಸಂಸ್ಕಾರ ಯು.ಆರ್.ಅನಂತಮೂರ್ತಿ ಅವರ ಕಾದಂಬರಿ ಆಧಾರಿತ ಸಿನಿಮಾ. `ಸಂಸ್ಕಾರ’ ಚಿತ್ರದಲ್ಲಿ ಪ್ರಾಣೇಶಾಚಾರ್ಯ ಪಾತ್ರವನ್ನು ನಿಭಾಯಿಸಿದರು. ಆ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಕೂಡ ಇವರೇ ಬರೆದಿದ್ದರು. ಅದಾದ ಮೇಲೆ ಶಂಕರ ನಾಗ್ ನಿರ್ದೇಶನದ `ಮಾಲ್ಗುಡಿ ಡೇಸ್‌’ ಕಿರುತೆರೆ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ `ವಂಶವೃಕ್ಷ’ ತೆರೆಗೆ ತರುವ ಮೂಲಕ ಡೈರೆಕ್ಟರ್ ಕೂಡ ಆದರು.
ನಂತರದ ದಿನಗಳಲ್ಲಿ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ‌ ಮರಾಠಿ ಸಿನಿಮಾರಂಗದಲ್ಲೂ ಛಾಪು ಮೂಡಿಸಿದರು.
ಇನ್ನು ಪ್ರಮುಖ ವಿಷಯ ಎಂದರೆ ಕನ್ನಡದ ಪ್ರಮುಖ ನಟರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಹಿರಿಮೆ ಗಿರೀಶ್ ಕಾರ್ನಾಡ ಅವರದ್ದು.


ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಕನ್ನಡಕ್ಕೆ ಪರಿಚಯಿಸಿದ ಕೀರ್ತಿ ಇದೇ ಗಿರೀಶ್ ಕಾರ್ನಾಡವರದ್ದು. ಗಿರೀಶ್ ಕಾರ್ನಾಡವರು ನಿರ್ದೇಶನದ ಮೊದಲ ಸಿನಿಮಾ ‘ವಂಶವೃಕ್ಷ’ ಮೂಲಕ ಸಾಹಸಸಿಂಹ ವಿಷ್ಣುವರ್ಧನ್ ಅವರು ಸಿನಿಮಾ ರಂಗ ಪ್ರವೇಶಿಸಿದರು.
ಅದೇರೀತಿ ಕರಾಟೆ ಕಿಂಗ್ ಶಂಕರ್ ನಾಗ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದೇ ಗಿರೀಶ್ ಕಾರ್ನಾಡ್. ಗಿರೀಶ್ ಕಾರ್ನಾಡರ ಒಂದಾನೊಂದು ಕಾಲದಲ್ಲಿ ಸಿನಿಮಾ ಮೂಲಕ ಶಂಕರಣ್ಣ ಸ್ಯಾಂಡಲ್ ವುಡ್ ಪ್ರವೇಶಿಸಿದರು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...