ಟಗರು ಸಿನಿಮಾದಲ್ಲಿ ಕಾನ್ಸ್ ಟೇಬಲ್ ಸರೋಜ ಪಾತ್ರ ಮಾಡಿದ್ದ ನಟಿ ತ್ರಿವೇಣಿ ರಾವ್ ಪುನೀತ್ ಜತೆಗೆ ಹೆಗಲಿಗೆ ಕೈ ಹಾಕಿ ಆತ್ಮೀಯವಾಗಿ ಫೋಟೋಗೆ ಪೋಸ್ ಕೊಟ್ಟಿದ್ದನ್ನು ನೋಡಿ ಅಪ್ಪು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ.
ಯಾರೇ ಆಗಲಿ, ಹೀಗೆ ಅಪ್ಪು ಹೆಗಲಿಗೆ ಕೈ ಹಾಕಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದೇಕೆ ಎಂದು ಅಭಿಮಾನಿಗಳು ತಗಾದೆ ತೆಗೆದಿದ್ದಾರೆ. ಅಂದ ಹಾಗೆ ಕಾನ್ಸ್ ಟೇಬಲ್ ಸರೋಜ ಖ್ಯಾತಿಯ ತ್ರಿವೇಣಿ ಈಗ ಪುನೀತ್ ಯುವರತ್ನದಲ್ಲೂ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ.