ಸೆಲಬ್ರಿಟಿಗಳ ಜೀವನದ ಬಗ್ಗೆ ತಿಳಿದುಕೊಳ್ಳುವ ಕ್ಯೂರಿಯಾಸಿಟಿ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲವರ ಬಗ್ಗೆ ಅದೆಷ್ಟೋ ವಿಷಯಗಳು ಗೊತ್ತಿರಲ್ಲ. ಆದರೆ, ಕೆಲವು ವಿಷಯಗಳು ಗೊತ್ತಾದಾಗ ಶಾಕ್ ಎನಿಸುತ್ತಿದೆ. ಹೀಗೂ ಇತ್ತಾ ಅನಿಸುತ್ತದೆ. ಎಲ್ಲರ ಲವ್ ಸ್ಟೋರಿ ತರ ಸೆಲಬ್ರಿಟಿಗಳ ಲವ್ ಸ್ಟೋರಿ ಇದ್ದರೂ ಅದು ಅವರ ಸಮಾಜದ ಸ್ಥಾನ-ಮಾನದಿಂದ ರೋಚಕ ಅನಿಸಿ ಬಿಡುತ್ತವೆ.
ಸದ್ಯ ಈಗ ಬಾಲಿವುಡ್ ಮತ್ತು ಟಾಲಿವುಡ್ನಲ್ಲಿ ಮಿಂಚುತ್ತಿರುವ ಚೆಲುವೆ ಅಂದ್ರೆ ಕೈರಾ ಅಡ್ವಾಣಿ. ಹಾಟ್ ಹಾಟ್ ಲುಕ್ ನಿಂದ, ತಮ್ಮ ಅಭಿನಯದಿಂದ ಸಿನಿ ರಸಿಕರ ಮನ ಗೆದ್ದಿದ್ದಾರೆ. ಕೈರಾ ಕಬೀರ್ ಸಿಂಗ್ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಸೂಪರ್ ಹಿಟ್ ‘ಅರ್ಜುನ್ ರೆಡ್ಡಿ’ ಚಿತ್ರದ ‘ರೀಮೇಕ್ ಕಬೀರ್’ ಸಿಂಗ್ ಸಿನಿಮಾ ಇದಾಗಿದ್ದು ಶಾಹಿದ್ ಕಪೂರ್ ಕಬೀರ್ ಸಿಂಗ್ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಹಾಟ್ ದೃಶ್ಯಗಳಿವೆ. ಇಬ್ಬರು ಸಹ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಕಬೀರ್ ಸಿಂಗ್ ಇದೇ ತಿಂಗಳು 21ಕ್ಕೆ ತೆರೆಗೆ ಬರುತ್ತಿದೆ. ಅದಕ್ಕಾಗಿ ಇದೀಗ ಬಾಲಿವುಡ್ ನಟಿ ಕೈರಾ ಅಡ್ವಾನಿ ಸದ್ಯ ಕಬೀರ್ ಸಿಂಗ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.ಚಿತ್ರದ ಪ್ರಮೋಷನ್ ಸಮಯದಲ್ಲಿ ಕೈರಾ ಕೋಟ್ಯಾಂತರ ಅಭಿಮಾನಿಗಳಿಗೆ ಬಿಗ್ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಅದೇನಪ್ಪಾ ಅಂದ್ರೆ ಕೈರಾ ಅಡ್ವಾಣಿ ಚಿಕ್ಕ ವಯಸ್ಸಿನಲ್ಲೆ ಲವ್ವಲ್ಲಿ ಬಿದ್ದು ಒದ್ದಾಡಿದ್ದ ವಿಚಾರವನ್ನುಹೇಳಿಕೊಂಡಿದ್ದಾರೆ. ಹೌದು, ಕೈರಾಗೆ 10ನೇ ತರಗತಿ ಓದುತ್ತಿರುವಾಗ್ಲೆ ಒಬ್ಬ ಹುಡುಗನ ಜೊತೆ ಲವ್ ಆಗಿತ್ತಂತೆ. ಮೊದಲ ಬಾಯ್ ಫ್ರೆಂಡ್ ಯಾರು ಅಂತ ಮಾತ್ರ ಕೈರಾ ಹೇಳಲಿಲ್ಲಾ. ಆದ್ರೆ ಲವ್ ಸ್ಟೋರಿಯನ್ನು ಮಾತ್ರ ಹೇಳಿಕೊಂಡಿದ್ದಾರೆ. ಲವ್ ಮಾಡೋಕೆ ಶುರುಮಾಡಿದ ಸ್ವಲ್ಪ ದಿನಗಳಲ್ಲೆ ಬ್ರೇಕ್ ಅಪ್ ಕೂಡ ಮಾಡಿಕೊಂಡಿದ್ದರಂತೆ ಕೈರಾ. ಈ ಸುದ್ದಿಯನ್ನ ಕೇಳಿದ ಅಭಿಮಾನಿಗಳಿಗೆ ಶಾಕ್ ಆಗಿದೆ.