` ಕನಸು ದೊಡ್ಡದಿರಲಿ.. ಅದಕ್ಕೆ ಹಾಕೋ ಶ್ರಮ ಅದಕ್ಕಿಂತ ದೊಡ್ಡದಿರಲಿ'

Date:

ಅವನಿಗೆ ನಾನು ಏನಾದರೂ ಸಾಧಿಸಲೇಬೇಕು ಅನ್ನೋ ಹಠ..! ಅವನ ಗೆಳೆಯನೂ ಅದೇ ತರದವನು. ಇಬ್ಬರೂ ಯಾವಾಗ್ಲೂ ಏನಾದ್ರೂ ಸಾಧಿಸಬೇಕು ಅಂತ ಅನ್ನೋದರ ಬಗ್ಗೇನೇ ಚರ್ಚೆ ಮಾಡ್ತಿದ್ರು. ಇಬ್ಬರ ಐಡಿಯಾಗಳು ಬೇರೆಬೇರೆ ಆದ್ರೂ, ಕನಸು ಟಾರ್ಗೆಟ್ ಒಂದೇ ಆಗಿತ್ತು..! ಜೀವನದಲ್ಲಿ ಯಶಸ್ವಿಯಾಗಬೇಕು ಅನ್ನೋದು. ಸರಿ ಹೀಗೆ ಅವತ್ತೊಂದು ದಿನ ಇಬ್ಬರೂ ಕೂತು ಚರ್ಚೆ ಮಾಡ್ತಾ ಇದ್ರು. ಮಾತು ಮಾತು ಜೋರಾಯಿತು, ಅವರಿಬ್ಬರಲ್ಲಿ ನಾನು ತಾನು ಅನ್ನೋದು ಶುರುವಾಯ್ತು. ನಾನು ಹೇಳಿದ್ದು ಸರಿ, ನಾನು ಮಾಡಿದ್ದು ಸರಿ ಅಂತ ಕಾಲು ಕೆರೆದು ಜಗಳಾಡೋಕೆ ಶುರು ಮಾಡಿದ್ರು. ಕೊನೆಗೆ ಇಬ್ಬರೂ ಒಂದು ನಿರ್ಧಾರಕ್ಕೆ ಬಂದ್ರು. ಇಬ್ಬರೂ ಮುಂದಿನ ಎರಡು ವ‍ರ್ಷ ಒಬ್ಬರನ್ನೊಬ್ಬರು ಭೇಟಿಯಾಗೋದೇ ಬೇಡ. ಎರಡು ವರ್ಷ ಬಿಟ್ಟು ಇಬ್ಬರೂ ಇದೇ ಜಾಗದಲ್ಲಿ ಭೇಟಿ ಆಗೋಣ. ಯಾರು ಎಷ್ಟು ಉದ್ದಾರ ಆಗಿರ್ತಾರೆ ನೋಡೋಣ ಅಂತ ಹೇಳಿ ಅವರಿಬ್ಬರೂ ಅಲ್ಲಿಂದ ಹೊರಟರು..!
ಇಬ್ಬರಲ್ಲಿ ಒಬ್ಬ ಕಿರಣ್, ಮತ್ತೊಬ್ಬ ಚರಣ್. ಇಬ್ಬರು ಇಂಜಿನಿಯರಿಂಗ್ ಮುಗಿಸಿದ್ರು. ಈಗ ಬದುಕು ರೂಪಿಸಿಕೊಳ್ಳೋಕೆ ಹೊರಟರು. ಚರಣ್ ತಾನು ಏನಾಗಬೇಕು ಅಂತ ಯಾವಾಗಲೂ ಕನಸು ಕಾಣ್ತಿದ್ದ. ನಾನು ದೊಡ್ಡ ಮನೆ ಕಟ್ತಬೇಕು, ದೊಡ್ಡ ಕಾರು ತಗೋಬೇಕು, ಫಾರಿನ್ ನಲ್ಲಿ ಸೆಟ್ಲ್ ಆಗಬೇಕು, ಹೀಗೇ ಅವನ ಆಸೆಗಳು ನೂರಾರು. ಈ ಕಡೆ ಕಿರಣ್ ಗೆ ಸಹ ಆಸೆಗಳಿತ್ತು. ಆದ್ರೆ ಅದು ಆ ತರದ್ದಲ್ಲ. ತಾನು ದೊಡ್ಡ ಆಫೀಸಿನ ಮಾಲೀಕನಾಗಬೇಕು, ಹತ್ತಾರು ಜನರಿಗೆ ಕೆಲಸ ಕೊಡಬೇಕು, ರಾತ್ರಿ ಹಗಲು ದುಡೀಬೇಕು, ಒಂದೆರೆಡು ವರ್ಷ ಕಷ್ಟಪಟ್ಟರೆ ಆಮೇಲೆ ಲೈಫ್ ಸೂಪರ್ರಾಗಿರುತ್ತೆ ಅಂತ ಕನಸು ಕಾಣ್ತಿದ್ದ. ಇಬ್ಬರೂ ಬೆಂಗಳೂರಿಗೆ ಬಂದು ಬಿದ್ರು.
ಚರಣ್ ಅಲ್ಲಿ ಇಲ್ಲಿ ಕೆಲಸ ಹೊಡುಕೋಕೆ ಶುರು ಮಾಡ್ದ. ಎಲ್ಲಿಯೂ ೧೫ ಸಾವಿರಕ್ಕಿಂತ ಹೆಚ್ಚಿನ ಸಂಬಳ ಸಿಗಲೇ ಇಲ್ಲ. ಈ ಕಡೆ ಕಿರಣ್ ಸಹ ರೆಸ್ಯೂಮ್ ಹಿಡಿದು ಅಲ್ಲಿಇಲ್ಲಿ ಅಲೆದ. ಒಂದು ಕಂಪನಿಯಿಂದ ಫೋನ್ ಬಂತು ನೀವು ಸೆಲೆಕ್ಟ್ ಆಗಿದ್ದಿರಿ ೧೪ ಸಾವಿರ ಸಂಬಳ ಅಂತ. ಮರು ಮಾತಾಡದೇ ಅವನು ಖುಶಿಯಾಗಿ ಒಪ್ಪಿಕೊಂಡ. ಟೀಂ ಮೆಂಬರ್ ಆಗಿ ಒಂದು ಸಾಫ್ಟ್ ವೇರ್ ಕಂಪನಿ ಸೇರಿಕೊಡ. ೮-೧೦ ತಿಂಗಳು ಕಷ್ಟಪಟ್ಟು ಕೆಲಸ ಕಲಿತ. ಅವರ ಟೀಮಿನಲ್ಲಿ ಕಿರಣ್ ಎಲ್ಲರಿಗಿಂತ ಬೆಸ್ಟ್ ಅನ್ನೋ ತರ ಆಗಿಹೋಗಿದ್ದ. ಯಾವ ಕೆಲಸ ಕೊಟ್ಟರೂ ಚಿಟಿಕೆ ಹೊಡೆಯೋದ್ರಲ್ಲಿ ಮುಗಿಸ್ತಾ ಇದ್ದ. ಆ ಕಂಪನಿಯ ಕ್ಲೈಂಟ್ ಗಳೆಲ್ಲಾ ತಮ್ಮ ಕೆಲಸ ಕಿರಣ್ ಮಾಡಬೇಕು ಅಂತ ಕೇಳೋ ಹಾಗಾಗಿಹೋಯ್ತು. ಈ ಕಡೆ ಚರಣ್ ಊರಿಂದ ಅಪ್ಪ ಅಮ್ಮನ ಹತ್ತಿರ ದುಡ್ಡು ಇಸ್ಕೊಂಡು ಕೆಲಸ ಹುಡುಕೋದು ಮುಂದುವರೆಸಿದ್ದ. ಎಲ್ಲೆಲ್ಲಿ ಅಲೆದರೂ ಅವನು ಅಂದುಕೊಂಡ ೪೦-೫೦ ಸಾವಿರ ಸಂಬಳ ಅವನಿಗೆ ಸಿಗಲೇ ಇಲ್ಲ..! ಆದ್ರೆ ಕಿರಣ್ ಮಾಡೋ ಕೆಲಸಕ್ಕೆ ಅವನ ಕಂಪನಿ ಅವನ ಸಂಬಳ ಡಬಲ್ ಮಾಡಿ ಕೂರಿಸಿತ್ತು..! ಕಿರಣ್ ಗೆ ಇನ್ನು ನಾನಿಲ್ಲಿ ಕೂತರೆ ನನ್ನ ಕನಸು ಈಡೇರಲ್ಲ ಅನ್ನಿಸ್ತು. ತಾನೆ ಒಂದು ಪುಟ್ಟ ಕಂಪನಿ ಆರಂಭಿಸಿದ್ರೆ ಹೇಗೆ ಅಂತ ಯೋಚನೆ ಮಾಡಿದ. ತನ್ನ ಬ್ಯಾಂಕಿಂಗ್ ಕ್ಲೈಂಟ್ ಒಬ್ಬರ ಸಹಾಯದಿಂದ ಕಂಪನಿ ಆರಂಭಿಸಲು ಸಾಲ ಪಡೆದ… ೭೦೮ ಜನ ಸ್ನೇಹಿತರನ್ನೇ ಸೇರಿಸಿಕೊಂಡು ಒಂದು ಪುಟ್ಟ ಕಂಪನಿ ಆರಂಬಿಸಿಯೇ ಬಿಟ್ಟ.. ಅವನ ಆ ಕಂಪನಿಯ ಕ್ಲೈಂಟ್ ಗಳೆಲ್ಲ ಕಿರಣ್ ಹುಡುಕಿ ಅವನ ಕಂಪನಿಗೆ ಬಂದ್ರು. ನೋಡ ನೋಡ್ತಿದ್ದ ಹಾಗೆಯೇ ಅವನ ಕಂಪನಿ ದೊಡ್ಡದಾಗಿ ಬೆಳೀತಾ ಹೋಯ್ತು. ಈ ಕಡೆ ಚರಣ್ ಅಲೆದು ಅಲೆದು ಸುಸ್ತಾಗಿ, ಒಲ್ಲದ ಮನಸ್ಸಿನಲ್ಲಿ ಯಾವುದೋ ಕಂಪನಿಯೊಂದಕ್ಕೆ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಸೇರಿಕೊಂಡು ಬೇಕೋ ಬೇಡ್ವೋ ಅನ್ನೋ ಹಾಗೆ ಕೆಲಸ ಮಾಡ್ತಿದ್ದ..! ಚರಣ್ ಅದೃಷ್ಟಕ್ಕೆ ಒಂದು ದಿನ ಕಂಪನಿಯೊಂದರಿಂದ ಫೋನ್ ಬರುತ್ತೆ. ನಮ್ಮ ಕಂಪನಿಗೆ ಸೀನಿಯರ್ ಮ್ಯಾನೇಜರ್ ಕೆಲಸಕ್ಕೆ ನಮ್ಮ ಬಾಸ್ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ತಿಂಗಳಿಗೆ ೬೦ ಸಾವಿರ ಸಂಬಳ ಅಂತ ಹೇಳ್ತಾರೆ. ಪರಮಾಶ್ಚರ್ಯವಾದರೂ ಒಪ್ಪಿಕೊಂಡು ಆ ಕಂಪನಿಗೆ ಹೋಗ್ತಾನೆ. ಕಿರಣ್ ಜೀವಮಾನದಲ್ಲಿ ಇಷ್ಟು ಸಂಬಳ ತಗೊಳೋದಿಲ್ಲ. ನಮ್ಮಿಬ್ಬರ ಚ್ಯಾಲೆಂಜಲ್ಲಿ ನಾನೇ ಗೆದ್ದೆ ಅಂತ ಚರಣ್ ಹಿರಿಹಿರಿ ಹಿಗ್ತಾನೆ. ಮೊದಲ ದಿನ. ಎಚ್. ಆರ್. ಎಲ್ಲರನ್ನೂ ಪರಿಚಯ ಮಾಡಿಸಿ, ನಮ್ಮ ಬಾಸ್ ಚೇಂಬರ್ ಇದು. ಒಳಗೆ ಹೋಗಿ ಅಂತಾರೆ.ಮೇ ಐ ಕಮ್ ಇನ್ ಸಾರ್ ಅಂತ ಒಳಗೆ ಬಂದು ಬಾಸ್ ಮುಖ ನೋಡಿದವನಿಗೆ ಶಾಕ್ ಆಗುತ್ತೆ. ಅಲ್ಲಿರೋದು ತನ್ನ ಗೆಳೆಯ ಕಿರಣ್. ಗೆಳೆಯನ್ ಕಂಪನಿಯಲ್ಲೇ ಕೆಲಸಕ್ಕೆ ಸೇರಿದ್ದ ಚರಣ್..! ಕಿರಣ್ ಅವನನ್ನು ಕೂರಿಸಿಕೊಂಡು ಹೇಳ್ತಾನೆ ` ನೋಡು ಚರಣ್, ನೀನು ಕನಸು ಕಾಣೋದ್ರಲ್ಲಿ ತಪ್ಪಿಲ್ಲ, ಆದ್ರೆ ಆ ಕನಸನ್ನು ಸಾಕಾರಗೊಳಿಸೋಕೂ ಪ್ರಯತ್ನಪಡು. ನಾನು ನಿನ್ನ ಹಾಗೆ ಜಾಸ್ತಿ ಸಂಬಳದ ಕೆಲ್ಸ ಬೇಕು ಅಂತ ಕೂತಿದ್ರೆ ಇವತ್ತೆಲ್ಲೋ ಕೆಲಸ ಮಾಡಿಕೊಂಡು ಇರ್ತಿದ್ದೆ. ನಿನ್ನಿಂದಲೇ ನಾನು ಈ ಕಂಪನಿ ಕಟ್ಟೊಕೆ ಸಾಧ್ಯವಾಗಿದ್ದು. ಎಷ್ಟೇ ಆಗ್ಲಿ ನೀನು ನನ್ನ ಗೆಳೆಯ.. ಜೊತೆಗಿದ್ದು ಈ ಕಂಪನಿ ಕಟ್ಟೋಣ. ನಿನ್ನ ಕನಸುಗಳು ಸಾಕಾರವಾಗೋಕೆ ಒಟ್ಟಿಗೇ ಒದ್ದಾಡೋಣ’..! ಚರಣ್ ಗೆ ಮಾತು ಹೊರಡಲಿಲ್ಲ.. ತಪ್ಪಿನ ಅರಿವಾಗಿತ್ತು..! ಅವನ ಹೊಸ ಜೀವನ ಅಲ್ಲಿಂದ ಶುರುವಾಯ್ತು.

  • ಕೀರ್ತಿ ಶಂಕರಘಟ್ಟ

POPULAR  STORIES :

ಇಲ್ಲಿ ಮುಚ್ಚಿಕೊಂಡರು.. ಅಲ್ಲಿ ಬಿಚ್ಚಿಕೊಂಡರು..!! ಏನಿದೆಲ್ಲಾ ದೀಪಿಕಾ..?

ಭಾರತದಲ್ಲಿದ್ದಾರೆ ಮೂವತ್ತು ಲಕ್ಷಕ್ಕಿಂತ ಹೆಚ್ಚು ವೇಶ್ಯೆಯರು..!? ಮೈ ಮಾರಾಟ ದಂಧೆ ಲೀಗಲೈಜ್ ಆಗುತ್ತಾ..?

ಹೆಂಗಿದ್ದ ಹೆಂಗಾದ ಗೊತ್ತಾ ಅಂಬಾನಿ ಪುತ್ರ..! ಐಪಿಎಲ್ ವೇಳೆ ಅಚ್ಚರಿಗೊಳ್ಳಲು ಸಿದ್ಧರಾಗಿ..!

ದ್ವಾರಕೆಯ ದೋಸೆ ಮತ್ತವಳ ನೆನಪು..!

ಪಾಕಿಸ್ತಾನಕ್ಕಾಗಿ ಖಂಡೀಲ್ ಬಲೋಚ್ ಬೆತ್ತಳಾಗುತ್ತಾಳಂತೆ..!? #Video

`ಆ್ಯಮ್ ಸಾರೀ ಗೇಲ್’ ಅಂದ ಬಿಗ್ಬಿ ಅಮಿತಾಬ್..!? ಅಮಿತಾಬ್ ಮಾಡಿದ ತಪ್ಪೇನು..?

ಇಸ್ಲಾಂ ಮಹಾನ್ ಧರ್ಮ ಎಂದ ನಮೋ..!? ಪಾಕಿಸ್ತಾನ ಮನಃಸ್ಥಿತಿ, ಭಾರತ ಯಥಾಸ್ಥಿತಿ..!?

ಪ್ರೀತಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ..! ಪ್ರೀತಿ `ಬೆಂಕಿ’ ಹುಷಾರು..!?

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...