ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ ತೂಗದೀಪ ಶ್ರೀನಿವಾಸ್ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು.
ತಂದೆಯ ಹೆಸರಿದ್ದರೂ ದರ್ಶನ್ ಅವರ ಹೆಸರಿನ ಬಲದಿಂದ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡವರಲ್ಲ. ಕಷ್ಟ ಪಟ್ಟು ಮೇಲೆ ಬಂದವರು. ಮೆಜೆಸ್ಟಿಕ್ ಸಿನಿಮಾ ಮೂಲಕ ಚಂದನವನಕ್ಕೆ ಪ್ರವೇಶಿಸಿದ ದರ್ಶನ್ ಅವರ 50ನೇ ಸಿನಿಮಾ ಕುರುಕ್ಷೇತ್ರ ರಿಲೀಸ್ ಗೆ ರೆಡಿಯಾಗಿದೆ. ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ.
ಮೆಜೆಸ್ಟಿಕ್ ನಿಂದ ಹಿಡಿದು ಕುರುಕ್ಷೇತ್ರದವರೆಗೆ ದರ್ಶನ್ ಕೊಟ್ಟ ಎಲ್ಲಾ ಸಿನಿಮಾಗಳೂ ಒಂದು ಲೆವೆಲ್ ಗೆ ಹಿಟ್ ಆದವೇ.
ದರ್ಶನ್ ಜೊತೆ ನಟಿಸ ಬೇಕು ಎನ್ನುವುದು ಎಲ್ಲಾ ನಟಿಯರ ಆಸೆ ಕೂಡ ಆಗಿರುತ್ತದೆ. ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲು ಟಾಪ್ ನಟಿಯರು ಕೂಡ ಇಷ್ಟಪಡ್ತಾರೆ.
ಅದೇರೀತಿ ಕನ್ನಡದ ಟಾಪ್ ನಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಕೂಡ ದರ್ಶನ್ ಜೊತೆ ನಟಿಸುವ ಕನಸು ಹೊಂದಿದ್ದಾರೆ.
ಸಂದರ್ಶನವೊಂದರಲ್ಲಿ ಅವರು ಈ ವಿಷಯವನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ದರ್ಶನ್ ಅವರು ಬಹುಕಾಲದಿಂದ ಆತ್ಮೀಯರು. ಆದರೆ, ಅವರ ಜೊತೆ ನಟಿಸಲು ಆಗಿಲ್ಲ. ಅವಕಾಶ ಸಿಕ್ಕರೆ ಅವರೊಡನೆ ನಟಿಸುವೆ ಎಂದಿದ್ದಾರೆ.
ಅದೇರೀತಿ ರಾಗಿಣಿಗೆ ಇಷ್ಟವಾದ ನಟಿ ಅವರ ಗೆಳತಿ ಐಂದ್ರಿತಾ ರೇ ಅಂತೆ. ಅದೇ ರೀತಿ ಇಷ್ಟದ ನಟ ಶಿವರಾಜ್ ಕುಮಾರ್ ಅವರಂತೆ.
ಎಂಎಂಸಿಎಚ್ ಬಳಿಕ ರಾಗಿಣಿ ದ್ವಿವೇದಿ ಅವರು ಅಧ್ಯಕ್ಷ ಇನ್ ಅಮೆರಿಕಾದಲ್ಲಿ ನಟಿಸಿದ್ದಾರೆ. ಇದರ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೀತಾ ಇದೆ. ಶರಣ್ ಈ ಸಿನಿಮಾದ ಹೀರೋ.