ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ, ಗೋವಾದ 10 ಶಾಸಕರು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಸಭಾ ಸದಸ್ಯರನ್ನು ಪಕ್ಷಾಂತರ ಮಾಡಲು ಬಿಜೆಪಿ ಮುಂದಾಗಿದೆ. ಜೊತೆಗೆ ಕರ್ನಾಟಕದಲ್ಲಿಯೂ ಗಾಳ ಹಾಕಲಾಗಿದೆ. ರಾಜ್ಯದ ಶಾಸಕರಿಗೆ 30-40 ಕೋಟಿ ರೂ. ಆಫರ್ ನೀಡುವ ಮೂಲಕ ಒಂದು ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದ್ದು, ಕೇಂದ್ರದ ಇಡಿ, ಆದಾಯ ತೆರಿಗೆ ಇಲಾಖೆ ಏನು ಮಾಡುತ್ತಿದೆ. ಈ ಬಗ್ಗೆ ಮೌನವೇಕೆ ಎಂಬುದು ತಿಳಿಯುತ್ತಿಲ್ಲ ಎಂದು ಪ್ರಶ್ನಿಸಿದ್‌ಆರೆ.
ರಾಜ್ಯ ರಾಜಕೀಯದ ಪ್ರಸ್ತುತ ಬೆಳವಣಿಗೆಗೆ ಮೋದಿ ಮತ್ತು ಅಮಿತ್ ಶಾ ಕಾರಣ. ಒಂದು ಕಡೆ ಸಿದ್ದಾಂತ ಬಗ್ಗೆ ಮಾತನಾಡಿ, ಮತ್ತೊಂದು ಕಡೆ ಪ್ರಜಾಪ್ರಭುತ್ವ ಹಾಳು ಮಾಡಿ ಏಕಪಕ್ಷೀಯವಾಗಿ ಅಡಳಿತ ನಡೆಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಕಿಡಿಕಾರಿದರು.