ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ನಿತ್ಯಾ ಮೆನನ್, ತಾಪ್ಸೀ ಪನ್ನು, ಕೃತಿ ಕುಲ್ಹಾರಿ, ಶರ್ಮನ್ ಜೋಷಿ ಜತೆ ಕನ್ನಡದ ಹಿರಿಯ ಕಲಾವಿದ ಎಚ್.ಜಿ. ದತ್ತಾತ್ರೇಯ (ದತ್ತಣ್ಣ) ಪ್ರಮುಖ ಪಾತ್ರದ್ಲಲಿ ನಟಿಸಿದ ‘ಮಿಷನ್ ಮಂಗಲ್’ ಟ್ರೇಲರ್ ರಿಲೀಸ್ ಮಾಡಿದ್ದಾರೆ..
ಚಿತ್ರದ ಬಗ್ಗೆ ಮಾತನಾಡುತ್ತಿದ್ದ ನಟ ಅಕ್ಷಯ್ಕುಮಾರ್, ‘ಇವರು ದತ್ತಣ್ಣ. ತಮ್ಮ 45ನೇ ವಯಸ್ಸಿನಲ್ಲಿ ಆಯಕ್ಟರ್ ಆಗಬೇಕೆಂದು ನಿರ್ಧರಿಸಿದರು. ಆ ನಂತರ ದತ್ತಣ್ಣ ಮಾತನಾಡಿ, ಮೂರು ನ್ಯಾಷನಲ್ ಅವಾರ್ಡ್ ಪಡೆದಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.. ಇದನ್ನು ಕೇಳಿ ಚಿತ್ರತಂಡ ಖಷಿಯಿಂದ ಎಲ್ಲರೂ ಚಪ್ಪಾಳೆ ತಟ್ಟಿದ್ರು.. ನಾನು ಬಾಲ್ಯದಲ್ಲೇ ರಂಗಭೂಮಿಯಲ್ಲಿ ಕೆಲಸ ಮಾಡಿದ್ದೆ ಆದರೆ ನಟನೆಗೆ ಲೇಟ್ ಆಗಿ ಸೇರಿಕೊಂಡೆ . ಯಾಕಂದ್ರೆ ನಾನು 23 ವರ್ಷ ಏರ್ ಫೋರ್ಸ್ ನಲ್ಲಿ ಕೆಲಸ ಮಾಡುತ್ತಿದ್ದೆ. ಉಳಿದ 9 ವರ್ಷ ಹೆಚ್ಎಎಲ್ ನಲ್ಲಿ ಕೆಲಸ ಮಾಡಿದೆ. ನಾನು ಪಿಎಸ್ಎಲ್ವಿಯನ್ನ ಸ್ಪರ್ಶಿಸಿದ್ದೇನೆ. ನನ್ನ ಹಲವು ಸ್ನೇಹಿತರು ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ ಅವರೆಲ್ಲಾ ನನ್ನ ಕ್ಲಾಸ್ ಮೇಟ್ಸ್ ಎಂದು ಹೇಳಿದಾಗ ಸೋನಾಕ್ಷಿ, ‘ಇದೆಲ್ಲಾ ನೀವು ನನಗೆ ಹೇಳಿಯೇ ಇಲ್ಲ’ ಎಂದು ಅಚ್ಚರಿಯಿಂದ ಹೇಳಿದರು.
ನಾನು ಇವರೆನ್ನೆಲ್ಲಾ ದೂರದಿಂದ ಹಾಗೂ ಟಿವಿ ನಲ್ಲಿ ನೋಡಿದ್ದೆ ಈಗ ಇವರೊಂದಿಗೆ ಮಿಷನ್ ಮಂಗಲ್ ಚಿತ್ರದಲ್ಲಿ ಅಭನಯಿಸಿದ್ದು ಬಹಳ ಖುಷಿ ತಂದು ಕೊಟ್ಟಿದೆ.. ಅಲ್ಲಿ ಇವರೆಲ್ಲಾ ನನ್ನ ಸ್ನೇಹಿತರಾದರು ‘ಚಿತ್ರೀಕರಣದ ವೇಳೆ ನನಗೆ ಆತ್ಮವಿಶ್ವಾಸ ತುಂಬಿದರು. ಚೆನ್ನಾಗಿ ನೋಡಿಕೊಂಡರು ಎಂದು ದತ್ತಣ್ಣ ಹೇಳಿದಾಗ ಅಕ್ಷಯ್ಕುಮಾರ್, ಪ್ರಾಜೆಕ್ಟ್ ಬೇಗ ಮುಗಿಸಲು ನಾವು ಚೆನ್ನಾಗಿ ನೋಡಿಕೊಂಡ್ವಿ’ ಅಂತಾ ಹಾಸ್ಯದ ಸುರಿಮಳೆ ಗೈದರು..