ರಾಕಿಂಗ್ ಸ್ಟಾರ್ ಯಶ್ ಆರಂಭದಿಂದಲೂ ಸ್ಯಾಂಡಲ್ವುಡ್ನಲ್ಲಿ ಒಂದು ರೇಂಜ್ಗೆ ಹವಾ ಮೈಂಟೇನ್ ಮಾಡಿ ಕೊಳ್ತಾನೇ ಬರ್ತಿರೋರು. ಕೆಜಿಎಫ್ ಬಂದ ಮೇಲಂತೂ ಯಶ್ ಹವಾ ನಿರೀಕ್ಷೆಗೂ ಮೀರಿ ಹೆಚ್ಚಿತು. ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಯಶ್ ಫ್ಯಾನ್ಸ್ ಈಗ ವಿಶ್ವ ಮಟ್ಟದಲ್ಲಿದ್ದಾರೆ. ಟಾಲಿವುಡ್, ಕಾಲಿವುಡ್, ಮಾಲಿವುಡ್ ಅಷ್ಟೇ ಏಕೆ ಬಾಲಿವುಡ್ನಲ್ಲೂ ಯಶ್ ಹೆಸರು ರಾರಾಜಿಸುತ್ತಿದೆ.
ಯಶ್ ಈಗ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ಯಶ್ ಟಾಲಿವುಡ್ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಬಿಸಿಬಿಸಿ ಚರ್ಚೆ ನಡೆಯಲಾರಂಭಿಸಿದೆ. ಆರಂಭದಲ್ಲಿ ಇದು ಬರೀ ಅಂತೆಕಂತೆ ಸ್ಟೋರಿ ಎಂದೇ ಹೇಳಲಾಗಿತ್ತು. ಆದರೆ, ಇದು ಗಾಸಿಪ್ ಅಲ್ಲ ಯಶ್ ಪುರಿ ಜಗನ್ನಾಥ್ ಅವರ ಸಿನಿಮಾಕ್ಕೆ ಹೀರೋ..!
ಪುರಿಯವರು ಜನಗಣಮನ ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು ಈ ಸಿನಿಮಾ ಮಾಡಬೇಕೆಂದಾಗಿತ್ತು. ಆದರೆ ಅವರು ಕೊನೆ ಕ್ಷಣದಲ್ಲಿ ತಂಡದಿಂದ ವಾಪಸ್ ಬಂದರು. ಆದ್ದರಿಂದ ಶೂಟಿಂಗ್ ಶುರುವಾಗಿಲ್ಲ. ಬಳಿಕ ಸಿನಿಮಾಕ್ಕೆ ಯಶ್ ಅವರೇ ಸರಿ ಎಂದು ಪುರಿ ಡಿಸೈಡ್ ಮಾಡಿದ್ದು.. ಯಶ್ ರಿಂದ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಯಶ್ ಕೆಜಿಎಫ್ ಚಾಪ್ಟರ್ 2ನಲ್ಲಿ ಬ್ಯುಸಿ ಇರುವುದರಿಂದ ಆ ಬಳಿಕ ಜನಗಣ ಮನದಲ್ಲಿ ತೊಡಗಿಸಿಕೊಡಲಿದ್ದಾರೆ. ಜನವರಿಯಲ್ಲಿ ಸಂಕ್ರಾಂತಿ ಟೈಮ್ ನಲ್ಲಿ ಸಿನಿಮಾ ಟೇಕಾಫ್ ಆಗಲಿದೆ ಎಂಬ ಸುದ್ದಿ ಇದೆ.. ! ಈ ಸಿನಿಮಾ ಕೂಡ ಕನ್ನಡ, ತೆಲುಗು ಸೇರಿದಂತೆ ಬಹು ಭಾಷೆಯಲ್ಲಿ ಬರಲಿದೆ.
ಒಟ್ಟಿನಲ್ಲಿ ಯಶ್ ಸಖತ್ ಮಿಂಚುತ್ತಿದ್ದಾರೆ ಬಿಡಿ.. ಇದು ಅವರ ಪರಿಶ್ರಮದ ಪ್ರತಿಫಲ.