ಕೊಹ್ಲಿ ಕಮಾಲ್ , ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಜಯ !?

Date:

ಟಿ-20 ಮೊದಲ ಪಂದ್ಯದಲ್ಲಿ 20 ಓವರ್ ನಲ್ಲಿ 9 ವಿಕಟ್ ಪಡೆದು ಕೇವಲ 95 ರನ್ ಗೆ ಕಟ್ಟಿ ಹಾಕಿತು. ಟೀಮ್ ಇಂಡಿಯಾದ ಕರಾರುವಕ್ ಬೌಲಿಂಗ್ ಎದುರು ಬ್ಯಾಟ್ ಬೀಸಲಾಗದೆ ವಿಂಡೀಸ್ ಪಡೆ ಪೆವಿಲಿಯನ್ ಪೆರೇಡ್ ನಡೆಸಿತು. ಆದರೆ, ಉತ್ತರ ನೀಡಲು ಬಂದ ಟೀಮ್ ಇಂಡಿಯಾ ಸಹ ಆರಂಭದಲ್ಲಿ ಅಷ್ಟಾಗಿ ಉತ್ತಮ ಪ್ರದರ್ಶನವೇನೂ ನೀಡಲಿಲ್ಲ. ಕೇವಲ 1ರನ್ ಗೆ ಶಿಖರ್ ಧವನ್ ಎಲ್ ಬಿಡಬ್ಲೂ ಔಟ್ ಆದರೆ ರೋಹಿತ್ ಶರ್ಮಾ 24ರನ್ ಬಾರಿಸಿ ಆರನೇ ಓವರ್ ನಲ್ಲಿ ಕ್ಯಾಚಿತ್ತು ಹೊರಟರು. ಬಳಿಕ ಬಂದ ರಿಷಬ್ ಪಂತ್ ಖಾತೆ ತೆರೆಯದೇ ಹಿಂದಿರುಗಿದರು.

ವಿಕೆಟ್ ಪತನದಿಂದ ನಿಧಾನಗತಿಯ ಆಟವಾಡಿದ ಪರಿಣಾಮ ಟೀಮ್ ಇಂಡಿಯಾ 10ನೇ ಓವರ್ ಗೆ 3ವಿಕೆಟ್ ಕಳೆದುಕೊಂಡು 52 ರನ್ ಬಾರಿಸಿತು. ವಿರಾಟ್ ಕೊಹ್ಲಿ ಹೆಚ್ಚು ಹೊತ್ತು ಮೈದಾನದಲ್ಲಿದ್ದು ನಾಯಕನ ಆಟವಾಡಿ ಗೆಲುವಿನ ದಾರಿ ತೋರಿದರು.29 ಬಾಲ್ ಗೆ 19 ರನ್ ಬಾರಿಸಿ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ಔಟಾದರು.

ಬಳಿಕ ಕೃನಾಲ್ ಪಾಂಡ್ಯ ಸಿಕ್ಸರ್ ಬಾರಿಸಿ ಮಿಂಚಿನ ಆಟವಾಡಲೆತ್ನಿಸಿ 14 ಬಾಲ್ ಗೆ 12 ರನ್ ಬಾರಿಸಿ ಬೋಲ್ಡ್ ಔಟಾದರು. ಕೊನೆಗೆ ಸುಂದರ್ ಸಿಕ್ಸ್ ಬಾರಿಸುವ ಮೂಲಕ ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದರು. 6ವಿಕೆಟ್ ಕಳೆದುಕೊಂಡ ಭಾರತ 17.2 ಓವರ್ ನಲ್ಲಿ 98 ರನ್ ಬಾರಿಸಿ ಗೆಲುವಿನ ನಗೆ ಬೀರಿತು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...