ಟಾಲಿವುಡ್ ನಲ್ಲಿ ಇತ್ತೀಚೆಗೆ ರಿಲೀಸ್ ಆದ ‘ಇಸ್ಮಾರ್ಟ್ ಶಂಕರ್’ ಚಿತ್ರದ ಯಶಸ್ಸಿನ ಬಳಿಕ ಇದೀಗ ಚಾರ್ಮಿ ಕೌರ್ ಹಾಗೂ ಪೂರಿ ಜಗನ್ನಾಥ್ ಮತ್ತೊಂದು ಹಿಟ್ ಸಿನಿಮಾ ನೀಡಲು ಸಜ್ಜಾಗಿದ್ದು, ಈ ಚಿತ್ರಕ್ಕೆ ಟಾಲಿವುಡ್ ನ ಸ್ಟಾರ್ ವಿಜಯ್ ದೇವರಕೊಂಡ ಆಯ್ಕೆಯಾಗಿದ್ದಾರೆ.
ಈ ಶುಭ ಸುದ್ದಿಯನ್ನು ಸ್ವತಃ ನಟಿ ಹಾಗೂ ನಿರ್ಮಾಪಕಿ ಚಾರ್ಮಿ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.