ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ…. ಈ ಸಾಲುಗಳನ್ನ ಕೇಳಿದಾಕ್ಷಣ ಕಣ್ಣಮುಂದೆ ಅಣ್ಣಾವ್ರ ಚಿತ್ರ ಮೂಡುತ್ತೆ. ಅಪ್ಪಾಜಿ ಈ ಚಿತ್ರದಲ್ಲಿ ಅರ್ಜುನ ಮತ್ತು ಬಬ್ರುವಾಹನ ಎರಡೂ ಪಾತ್ರಗಳಲ್ಲಿ ಆರ್ಭಟಿಸಿದ್ದರು. ಈಗ ಮತ್ತೊಮ್ಮೆ ಬಬ್ರುವಾಹನನ ಪರಾಕ್ರಮ ತೆರೆಮೇಲೆ ರಾರಾಜಿಸಲಿದೆ. ಅಣ್ಣಾವ್ರ ಈ ಬಾರಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ತಿದೆ.
ಹೌದು…ದಾದಾ ಸಾಹೇಬ್ ಪಾಲ್ಕೆ ಪುರಸ್ಕೃತ ಡಾ. ರಾಜ್ ಕುಮಾರ್ ಅವರ ವೃತ್ತಿಜೀವನದ ಬ್ಲಾಕ್ ಬಸ್ಟರ್ ಬಬ್ರುವಾಹನ ರಿ ರಿಲೀಸ್ ಆಗ್ತಿದೆ. ಏಪ್ರಿಲ್ 24 ರಾಜ್ ಕುಮಾರ್ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಎರಡು ದಿನ ಮುಂಚಿತವಾಗೆ, ಅಂದ್ರೆ ಏಪ್ರಿಲ್ 22 ಕ್ಕೆ ಬಬ್ರುವಾಹನ ಆಧುನಿಕ ತಂತ್ರಜ್ಞಾನದೊಂದಿಗೆ ತೆರೆಗೆ ಅಪ್ಪಳಿಸಲಿದೆ.
1977 ರಲ್ಲಿ ಬಿಡುಗಡೆಯಾಗಿದ್ದ ಈ ಪೌರಾಣಿಕ ಚಿತ್ರಕ್ಕೆ ಹುಣಸೂರು ಕೃಷ್ಣಮೂರ್ತಿ ನಿರ್ದೇಶನವಿತ್ತು. ಈಗ ಕೆ.ಸಿ.ಎನ್ ಮೋಹನ್ ಚಿತ್ರಕ್ಕೆ ಹೊಸ ರೂಪ ಕೊಟ್ಟು ಬಿಡುಗಡೆಗೆ ಅಣಿಮಾಡಿದ್ದಾರೆ. ಬಹುತಾರಾಗಣ ಹೊಂದಿದ್ದ ಬಬ್ರುವಾಹನದಲ್ಲಿ ರಾಜ್ ಕುಮಾರ್ ಸೇರಿದಂತೆ ಬಿ.ಸರೋಜಾದೇವಿ, ಕಾಂಚನ, ಜಯಮಾಲ, ವಜ್ರಮುನಿ, ತೂಗುದೀಪ ಶ್ರೀನಿವಾಸ, ಶಕ್ತಿಪ್ರಸಾದ್ ಮತ್ತು ರಾಮಕೃಷ್ಣ ಅವರ ಅಭಿನಯವಿದೆ.
ಎವರ್ ಗ್ರೀನ್ ಚಿತ್ರ ಬಬ್ರುವಾಹನ ರಿ ರಿಲೀಸ್ ಆಗ್ತಿದ್ದು ರಾಜ್ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ. ಹಳೆ ಚಿತ್ರವನ್ನ ಹೊಸ ತಂತ್ರಜ್ಞಾನದೊಂದಿಗೆ ಕಣ್ತುಂಬಿಕೊಳ್ಳಲು ಎಲ್ಲರು ತುದಿಗಾಲಲ್ಲಿ ನಿಂತಿದ್ದಾರೆ.
- ಶ್ರೀ
POPULAR STORIES :
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!
ಚಂದದ ನಟಿಯರೇಕೆ ಸೂಸೈಡ್ ಮಾಡ್ಕೋತಾರೆ..!?
`ಸಾಯುವ ಮನಸ್ಸೆ..! ನಿನ್ನ ಕಡೆ ನನಗಿದೆ ತಿರಸ್ಕಾರ..!!’
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’