ರಾಜಕೀಯ ಎಂದರೆ ಸದಾ ದೂರ ಇರುವ ಅಣ್ಣಾವ್ರ ಫ್ಯಾಮಿಲಿಯ ಕುಡಿಯೊಂದು ಇದೀಗ ರಾಜಕೀಯ ಪ್ರವೇಶ ಮಾಡಲು ತಯಾರಾಗಿದೆ. ಹೌದು ರಾಜಣ್ಣ ಅವರ ಎರಡನೇ ಪುತ್ರ ರಾಘವೇಂದ್ರ ರಾಜ್ ಕುಮಾರ್ ಅವರು ಇದೀಗ ರಾಜಕೀಯ ಪ್ರವೇಶ ಮಾಡಲು ಸಜ್ಜಾಗಿದ್ದಾರೆ
ಅಂದಹಾಗೆ ರಾಘವೇಂದ್ರ ರಾಜ್ಕುಮಾರ್ ಅವರು ರಾಜಕೀಯ ಪ್ರವೇಶ ಮಾಡುತ್ತಿರುವುದು ನಿಜ ಜೀವನದಲ್ಲಲ್ಲ ಬದಲಾಗಿ ಸಿನಿಮಾದಲ್ಲಿ. ಹೌದು ಶ್ರೀಕಾಂತ್ ನಿರ್ದೇಶನದ ವಾರ್ಡ್ ನಂ 11 ಎಂಬ ಸಿನಿಮಾದಲ್ಲಿ ರಾಘಣ್ಣ ರಾಜಕಾರಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನಡೆದಿದ್ದು ಪುನೀತ್ ರಾಜ್ ಕುಮಾರ್ ಅವರು ಕ್ಲಾಪ್ ಮಾಡಿದ್ದಾರೆ.