ಡಿಕೆ ಶಿವಕುಮಾರ್ ಅವರನ್ನು ತಿಹಾರ್ ಜೈಲಿಗೆ ಗಳಿಸುತ್ತಿದ್ದಂತೆಯೇ ನಿನ್ನೆ ಲಕ್ಷ್ಮಿ ಹೆಬ್ಬಾಳ್ಕರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇಂದು ಮತ್ತೆ ಹಾಜರಾಗುವಂತೆ ಸೂಚನೆ ನೀಡಿದ್ದರು.
ಇಡಿ ಅಧಿಕಾರಿಗಳ ಸೂಚನೆ ಮೇರೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಒಂದಿಷ್ಟು ದಾಖಲೆಗಳ ಜೊತೆ ಲಕ್ಷ್ಮಿ ಕಚೇರಿಗೆ ಬಂದಿದ್ದಾರೆ. ಡಿಕೆಶಿ ಹಾಗೂ ಲಕ್ಷ್ಮಿ ಹಣಕಾಸು ವ್ಯವಹಾರದ ಬಗ್ಗೆ ನಿನ್ನೆ ಅಧಿಕಾರಿಗಳು ದಾಖಲೆ ಕೇಳಿದ್ದರಂತೆ. ಬ್ಯಾಂಕ್ ಖಾತೆ ಬಗ್ಗೆ ಮಾಹಿತಿ ಕೇಳಿದ್ದರಂತೆ. ಅಕೌಂಟ್, ವಹಿವಾಟು ಬಗ್ಗೆ ಮಾಹಿತಿ ಕೇಳಿದ್ದರಂತೆ. ಇದೆಲ್ಲದಕ್ಕೂ ಲಕ್ಷ್ಮಿ ಇಂದು ದಾಖಲೆ ನೀಡುವ ಸಾಧ್ಯತೆಯಿದೆ.