ಸೃಜನ್ ಮತ್ತು ಹರಿಪ್ರಿಯಾ ಒಟ್ಟಾಗಿ ಅಭಿನಯಿಸಿರುವ ಎಲ್ಲಿದ್ದೆ ಇಲ್ಲಿತನಕ ಚಿತ್ರ ಮುಂದಿನ ವಾರ ಬಿಡುಗಡೆಯಾಗಲು ರೆಡಿಯಾಗಿದೆ. ಇನ್ನು ಹೀಗಿರುವಾಗ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಾಯಕ ನಟ ಮತ್ತು ನಟಿ ಇಬ್ಬರು ಸಹ ತೊಡಗಿದ್ದು ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ವೇಳೆ ಚಿತ್ರದ ನಾಯಕಿ ಹರಿಪ್ರಿಯಾ ಅವರ ಬಳಿ ಕೆಲವೊಂದಷ್ಟು ಪ್ರಶ್ನೆಗಳನ್ನು ಮಾಧ್ಯಮ ಮಿತ್ರರು ಕೇಳಿದರು ಈ ಪ್ರಶ್ನೆಗಳಿಗೆ ಹರಿಪ್ರಿಯಾ ಅವರು ಸಹ ಉತ್ತರ ನೀಡಿದರು.
ಇನ್ನು ಈ ಸಂದರ್ಭದಲ್ಲಿ ಎಲ್ಲಿದ್ದೆ ಇಲ್ಲಿತನಕ ಚಿತ್ರದ ವಿಡಿಯೋ ಸಾಂಗ್ ವೊಂದರಲ್ಲಿ ಹರಿಪ್ರಿಯಾ ಮತ್ತು ಸೃಜನ್ ನಡುವೆ ಲಿಪ್ ಲಾಕ್ ನಡೆದಿತ್ತು. ಈ ಹಾಡಿನಲ್ಲಿ ಇದ್ದ ಲಿಪ್ ಲಾಕ್ ಕುರಿತಾಗಿ ಹರಿಪ್ರಿಯಾ ಅವರನ್ನು ಕೇಳಿದಾಗ ನಾನು ಸೃಜನ್ ಅವರ ಜೊತೆ ಲಿಪ್ ಲಾಕ್ ಮಾಡಿಲ್ಲ ಬದಲಾಗಿ ಸೃಜನ್ ಅವರಿಗೆ ಕಿರು ಕೊಟ್ಟಿದ್ದೇನೆ ಅಷ್ಟೆ ಎಂದು ಉತ್ತರ ನೀಡಿದರು. ಹೌದು ಸೃಜನ್ ಅವರ ಜೊತೆ ದೀರ್ಘ ಚುಂಬನ ವನ್ನೇನೂ ಮಾಡಿಲ್ಲ ಬದಲಾಗಿ ಕೇವಲ ಅರ್ಧ ಸೆಕೆಂಡ್ ನ ಒಂದು ಕಿಸ್ ಅಷ್ಟೇ ಹರಿಪ್ರಿಯಾ ಅವರು ಸೃಜನ್ ಅವರಿಗೆ ವಿಡಿಯೊದಲ್ಲಿ ನೀಡಿದ್ದಾರೆ.ಈ ಕುರಿತಾಗಿ ಹರಿಪ್ರಿಯಾ ಅವರು ಅದು ಲಿಪ್ ಲಾಕ್ ಅಲ್ಲ ಕೇವಲ ಕಿಸ್ ಅಷ್ಟೆ ಎಂದು ವಿವಾದಕ್ಕೆ ಬ್ರೇಕ್ ಹಾಕಿದ್ದಾರೆ.