ನಿನ್ನೆ ಅಂದರೆ ಜಂಬೂ ಸವಾರಿ ನಡೆಯುತ್ತಿದ್ದ ವೇಳೆ ನಂದಿ ಧ್ವಜ ಪೂಜೆ ಮುಗಿದ ನಂತರ ಸಿಎಂ ಯಡಿಯೂರಪ್ಪನವರ ಕಾಲಿಗೆ ಬಿಜೆಪಿ ಮುಖಂಡ ಕಾ.ಪು ಸಿದ್ದಲಿಂಗಸ್ವಾಮಿ ಅವರು ತಮ್ಮ ಕೈಯಾರೆ ಚಪ್ಪಲಿಯನ್ನು ತಂದು ತೊಡಿಸಿದ್ದಾರೆ. ಹೌದು ನಂದಿಧ್ವಜ ಪೂಜೆ ಮುಗಿದ ನಂತರ ಯಡಿಯೂರಪ್ಪನವರು ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಕಾ.ಪು ಸಿದ್ದಲಿಂಗ ಸ್ವಾಮಿ ಅವರು ತಮ್ಮ ನಾಯಕನಿಗೆ ಚಪ್ಪಲಿಯನ್ನು ತಂದು ತೊಡಿಸಿದರು.
ಬಿಸಿಲಿನಲ್ಲಿ ನಡೆಯುತ್ತಿದ್ದ ತಮ್ಮ ನಾಯಕನ ಪರಿಸ್ಥಿತಿಯನ್ನು ಕಂಡು ಕಾ.ಪು ಸಿದ್ದಲಿಂಗ ಸ್ವಾಮಿ ಅವರು ಈ ಕೆಲಸವನ್ನೇನೋ ಮಾಡಿದರು ಆದರೆ ಇದೀಗ ಈ ಕಾರ್ಯವೇ ವಿವಾದವನ್ನು ಸೃಷ್ಟಿಸಿದ್ದು , ಮತ್ತೊಬ್ಬರ ಕೈಯಲ್ಲಿ ಚಪ್ಪಲಿ ತೊಡಿಸಿ ಕೊಳ್ಳುವಂತಹ ಬುದ್ಧಿ ಯಡಿಯೂರಪ್ಪನವರಿಗೆ ಯಾಕೆ ಬಂತು ಅವರೆ ಹಾಕಿ ಕೊಳ್ಳಬಹುದಿತ್ತು ಎಂದೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಅಷ್ಟು ದೊಡ್ಡ ಮಟ್ಟದ ಕಾರ್ಯಕ್ರಮದಲ್ಲಿ ಈ ರೀತಿಯ ನಡೆಯನ್ನು ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಮಾಡಿದ್ದು ತಪ್ಪು ಎಂದು ಹಲವಾರು ಮಂದಿ ಹೇಳುತ್ತಿದ್ದಾರೆ. ನಾಯಕರಾಗಿ ಇತರರ ಕೈಯಿಂದ ಚಪ್ಪಲಿ ಹಾಕಿಸಿಕೊಂಡಿದ್ದು ಈ ಹಿಂದೆ ಹಲವಾರು ಮಂದಿ ಮಾಡಿದ ಕೆಲಸವೇ….