ಲೋಕಸಭಾ ಚುನಾವಣೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಎಲ್ಲಿದ್ದೀಯಪ್ಪ ಬಾಟ್ರೋಲ್ ಹೆಚ್ಚಾಗಿ ಕಂಡು ಬರುತ್ತಿತ್ತು. ಇನ್ನು ಈ ಒಂದು ಟ್ರೋಲ್ ಅನ್ನು ತೀರಾ ಗಂಭೀರವಾಗಿ ಪರಿಗಣಿಸಿದ ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಟ್ರೋಲ್ ಮಗ ಅಡ್ಮಿನ್ ವಿರುದ್ಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೇವೇಗೌಡರ ಕುಟುಂಬವನ್ನು ಕೀಳಾಗಿ ಟ್ರೋಲ್ ಮಾಡಲಾಗಿದೆ ಎಂದು ಪ್ರಕರಣವನ್ನು ದಾಖಲಿಸಿದರು. ಇನ್ನು ಈ ಪ್ರಕರಣವನ್ನು ಆಧರಿಸಿ ಜೈಕಾಂತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಇನ್ನು ಇಷ್ಟಕ್ಕೇ ಸುಮ್ಮನಿರದ ಜೈಕಾಂತ ಸಲ್ಲಿಸಬೇಕಾದ ಆಧಾರಗಳನ್ನು ಲಾ ಸಲ್ಲಿಸಿ ತಾನು ಮಾಡಿದ್ದು ತಪ್ಪಲ್ಲ ಎಂಬುದನ್ನು ಸಾಬೀತುಪಡಿಸಿ ಕೋರ್ಟ್ ಮೆಟ್ಟಿಲೇರಿದ್ದ. ಅಷ್ಟೇ ಅಲ್ಲದೇ ಮಾನನಷ್ಟ ಮೊಕದ್ದಮೆಯನ್ನು ಸಹ ಕೇಸ್ ಹಾಕಿದವರ ಮೇಲೆ ಹಾಕಿದ್ದ. ಇನ್ನು ಜೈಕಾಂತ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ಹೈಕೋರ್ಟ್ ಆತನನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು. ಇನ್ನು ಇದೀಗ ಆ ಕುರಿತಾಗಿ ಹೈಕೋರ್ಟ್ ತೀರ್ಪನ್ನು ಹೊರಡಿಸಿದ್ದು ಜೈಕಾಂತ ಎಂಬಾತನನ್ನು ಯಾವುದೇ ರೀತಿಯ ಸರಿಯಾದ ದಾಖಲೆ ಇಲ್ಲದೇ ಅಕ್ರಮವಾಗಿ ಬಂಧಿಸಿದ್ದಕ್ಕೆ ಒಂದು ಲಕ್ಷ ದಂಡ ಮತ್ತು ಛೀಮಾರಿಯನ್ನೂ ಹಾಕಿದೆ.