ಇಂದು ಇಡಿ ವಿಶೇಷ ನ್ಯಾಯಾಲಯದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ವಿಚಾರಣೆಯನ್ನು ನಡೆಸಲಾಯಿತು. ಇನ್ನು ವಿಚಾರಣೆಯ ವೇಳೆ ಡಿಕೆ ಶಿವಕುಮಾರ್ ಅವರು ಜೈಲಿನಲ್ಲಿ ತಮಗಾಗುತ್ತಿರುವ ಅನ್ಯಾಯ ಮತ್ತು ಅವಮಾನಗಳನ್ನು ನ್ಯಾಯಾಧೀಶರ ಎದುರು ತೋಡಿಕೊಂಡರು. ಹೌದು ತಿಹಾರ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಡಿಕೆ ಶಿವಕುಮಾರ್ ಅವರಿಗೆ ಜೈಲಿನ ಸವಲತ್ತುಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಸ್ವತಃ ಡಿಕೆ ಶಿವಕುಮಾರ್ ಅವರೇ ಆರೋಪ ಮಾಡಿದರು.
ಬ್ಯಾರಕ್ನಿಂದ ಹೊರಗೆ ಬಂದ ನಂತರ ಕುಳಿತುಕೊಳ್ಳಲು ಪೊಲೀಸರು ನನಗೆ ಯಾವುದೇ ಕುರ್ಚಿಯನ್ನು ನೀಡುತ್ತಿಲ್ಲ ಅಷ್ಟೆ ಅಲ್ಲದೆ ಲೈಬ್ರರಿಗೆ ಪುಸ್ತಕ ಓದಲು ಹೋದಾಗಲು ಸಹ ನಾನು ನಿಂತುಕೊಂಡೇ ಪುಸ್ತಕವನ್ನು ಓದಬೇಕಾಗಿದೆ ಅಲ್ಲಿಯೂ ಸಹ ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ ನನಗೆ ನೀಡುತ್ತಿಲ್ಲ ಎಂದು ಪೊಲೀಸರ ವಿರುದ್ಧ ಆರೋಪ ಮಾಡಿದರು. ನಾನು ಈ ಹಿಂದೆ ಬಂದೀಖಾನೆಯ ಸಚಿವನಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದೇನೆ ಒಬ್ಬ ವಿಚಾರಣಾಧೀನ ಕೈದಿಯನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎಂಬ ವಿಚಾರ ನನಗೆ ಚೆನ್ನಾಗಿ ತಿಳಿದಿದೆ. ತಿಹಾರ್ ಜೈಲಿನ ಪೊಲೀಸರು ನನ್ನ ವಿಚಾರದಲ್ಲಿ ಆ ರೀತಿ ನಡೆದುಕೊಳ್ಳುತ್ತಿಲ್ಲ ಎಂದು ಆರೋಪ ಮಾಡಿದರು.
ನ್ನು ಡಿಕೆ ಶಿವಕುಮಾರ್ ಅವರ ವಾದವನ್ನು ಆಲಿಸಿದ ನ್ಯಾಯಾಧೀಶರು ತಿಹಾರ್ ಜೈಲಿನ ಪೊಲೀಸರಿಗೆ ಬುದ್ಧಿವಾದ ಹೇಳಿದರೂ ಡಿಕೆಶಿ ಅವರಿಗೆ ಸರಿಯಾದ ರೀತಿ ವ್ಯವಸ್ಥೆಗಳನ್ನು ಕಲ್ಪಿಸಿ ಎಂದು ಛೀಮಾರಿ ಹಾಕಿದರು.