.ರಾಮಕುಮಾರ್ ಅವರ ಪುತ್ರ ಮತ್ತು ಡಾ ರಾಜ್ಕುಮಾರ್ ಅವರ ಮೊಮ್ಮಗ ಧೀರನ್ ರಾಮ್ ಕುಮಾರ್ ಚಂದನವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಧೀರನ್ ಅಭಿನಯದ ಶಿವ 143 ಚಿತ್ರ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಇನ್ನು ಈ ಚಿತ್ರ ಬಿಡುಗಡೆಗೂ ಮುನ್ನವೇ ಹೆಸರನ್ನು ಬದಲಾಯಿಸಿಕೊಂಡಿದೆ ಈ ಹಿಂದೆ ದಾರಿ ತಪ್ಪಿದ ಮಗ ಎಂದು ಶೀರ್ಷಿಕೆಯನ್ನು ಇಟ್ಟುಕೊಂಡಿತ್ತು ಆದರೆ ಇದೀಗ ಶಿವ 143 ಎಂದು ಮರುನಾಮಕರಣ ಮಾಡಲಾಗಿದೆ. ಇನ್ನು ಈ ಚಿತ್ರ ತೆಲುಗಿನ ಸೂಪರ್ ಹಿಟ್ RX 100 ನ ರಿಮೇಕ್ ಎಂಬ ಮಾತು ಇದೀಗ ಎಲ್ಲೆಡೆ ಕೇಳಿಬರುತ್ತಿದೆ.

ಹೌದು ತೆಲುಗಿನಲ್ಲಿ ಕಾರ್ತಿಕೇಯ ಮತ್ತು ಪಾಯಲ್ ರಜಪೂತ್ ಅವರು ಬೋಲ್ಡ್ ಆಗಿ ಅಭಿನಯಿಸಿದ್ದ ಈ ಚಿತ್ರ ಬ್ಲಾಕ್ಬಸ್ಟರ್ ಆಗಿತ್ತು ಇದೇ ಚಿತ್ರದ ಕನ್ನಡ ರಿಮೇಕ್ ಶಿವ 143. ತೆಲುಗಿನ RX100 ಚಿತ್ರದ ರೀಮೇಕ್ ಎಂದ ಕೂಡಲೇ ಎಲ್ಲರ ಕಿವಿ ನೆಟ್ಟಗಾದದ್ದಂತೂ ನಿಜ ಯಾಕೆಂದರೆ ಆ ಚಿತ್ರದ ಮೇಕಿಂಗ್ ಸ್ಟೈಲ್ ಆ ರೀತಿ ಇತ್ತು. ಚಿತ್ರದಲ್ಲಿ ಸಿಕ್ಕಾಪಟ್ಟೆ ಲಿಪ್ ಲಾಕ್ ಸೀನ್ ಮತ್ತು ಚಿಕ್ಕ ಮಕ್ಕಳು ನೋಡಬಾರದಂತ ದೃಶ್ಯಗಳು ಹಿಂಡೇ ಇದೆ.
ಇನ್ನು ಇಂತಹ ಚಿತ್ರವನ್ನು ಧೀರನ್ ರಾಮ್ ಕುಮಾರ್ ಅವರು ತಮ್ಮ ಮೊದಲನೆಯ ಚಿತ್ರವಾಗಿ ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ಇದೀಗ ಎಲ್ಲೆಡೆ ಚರ್ಚೆಗಳು ಆರಂಭವಾಗಿವೆ. ಇನ್ನು ತೆಲುಗಿನಲ್ಲಿ ಈ ಚಿತ್ರ ನೋಡಿರುವ ಸಿನಿ ಪ್ರೇಕ್ಷಕರು ಧೀರನ್ ಇಂಥ ಚಿತ್ರದಲ್ಲಿ ಅಭಿನಯಿಸಿದರೆ ಅಣ್ಣಾವ್ರ ಮೊಮ್ಮಗನಾಗಿ ಇಂಥ ಚಿತ್ರ ಮಾಡಿದ್ದಾರೆ ಎಂದು ಅಪಸ್ವರ ಕೇಳಿ ಬರದೆ ಇರದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.






