ನೋ ಫಾದರ್ ಇನ್ ಕಾಶ್ಮೀರ್ ಎಂಬ ಚಿತ್ರದಲ್ಲಿ ನಟಿ ಅಲಿಯಾ ಭಟ್ ಅವರ ತಾಯಿ ಸೋನಿ ರಾಜ್ದಾನ್ ಅವರು ಪ್ರಮುಖ ಪಾತ್ರಧಾರಿಯ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಕಾಶ್ಮೀರದಲ್ಲಿನ ವೈವಿಧ್ಯತೆ ಮತ್ತು ಸಂಸ್ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರ ಮೂಡಿ ಬರುತ್ತಿದ್ದು ಇದರಲ್ಲಿ ಸೋನಿ ಅವರದ್ದು ಸಹ ಒಂದು ಪ್ರಮುಖ ಪಾತ್ರ ಎಂದೇ ಹೇಳಲಾಗುತ್ತಿದೆ.
ಇನ್ನು ಇತ್ತೀಚೆಗಷ್ಟೇ ಈ ಕುರಿತಾಗಿ ಮಾತನಾಡಿರುವ ಸೋನಿ ಅವರು ಕಾಶ್ಮೀರ ಪಂಡಿತರ ಬದಲಾಗಿ ನಾನು ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇನೆ , ಕಾಶ್ಮೀರ ಮತ್ತು ಪಾಕಿಸ್ತಾನದ ಕುರಿತಾಗಿ ಮಾತನಾಡಿದಾಗಲೆಲ್ಲಾ ನನ್ನನ್ನು ಆ್ಯಂಟಿ ನ್ಯಾಷನಲಿಸ್ಟ್ ಮತ್ತು ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ ಎಂದೆಲ್ಲ ಟೀಕೆ ಮಾಡುತ್ತಾರೆ.. ಜನರು ಹೀಗೆ ಹೇಳಿದಾಗಲೆಲ್ಲ ನನಗೆ ಪಾಕಿಸ್ತಾನಕ್ಕೆ ಹೋಗಿ ಬಿಡಬೇಕು ಇಲ್ಲಿಗಿಂತ ಅಲ್ಲಿ ಹೆಚ್ಚು ಖುಷಿಯಾಗಿ ಇರುತ್ತೇನೆ ಎಂದು ಅನಿಸುತ್ತದೆ ಇದು ಸೋನಿ ಅವರು ಹೇಳಿಕೊಂಡಿದ್ದಾರೆ. ಇನ್ನು ಈ ಕುರಿತಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಾದ ಪ್ರತಿವಾದಗಳು ಏರ್ಪಟ್ಟಿದ್ದು ಹೊಸ ಕಾಂಟ್ರವರ್ಸಿ ನಿರ್ಮಿಸಿದೆ.