ಇತ್ತೀಚೆಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಜೈ ಜಗದೀಶ್ ಅವರು ತಮ್ಮ ಮೊದಲ ಪತ್ನಿ ಮತ್ತು ಮಗಳ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದ್ದನ್ನು ನೀವು ನೋಡಿರುತ್ತೀರಿ. ಇನ್ನು ಈ ಕುರಿತಾಗಿ ಕಿಚ್ಚ ಸುದೀಪ್ ಅವರು ಜೈ ಜಗದೀಶ್ ಅವರಿಗೆ ಸರ್ಪ್ರೈಸ್ ಒಂದನ್ನು ನೀಡಿದರು ಅದೇನೆಂದರೆ ಮೊದಲನೆಯ ಪತ್ನಿಯ ಮಗಳ ಧ್ವನಿಯನ್ನು ಜೈ ಜಗದೀಶ್ ಅವರಿಗೆ ಕೇಳಿಸಿದರು. ಇನ್ನು ಮೊದಲನೇ ಪತ್ನಿಯ ಮಗಳು ಜೈಜಗದೀಶ್ ಅವರಿಗೆ ಮನೆಯ ಹೊರಗೆ ಜೈಜಗದೀಶ್ ಅವರ ಎರಡನೇ ಪತ್ನಿ ಮತ್ತು ಮಕ್ಕಳು ಏನು ಮಾಡಿದರು ಎಂಬುದನ್ನು ತಿಳಿಸಿದ್ದಾರೆ.
ಅದು ಜೈ ಸತೀಶ್ ಅವರು ಕಣ್ಣೀರು ಹಾಕಿದ ನಂತರ ಅವರ ಎರಡನೇ ಪತ್ನಿ ಮೂವರು ಪುತ್ರಿಯರು ಮೊದಲನೆಯ ಪತ್ನಿಯ ಮಗಳನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ ಎಂಬುದನ್ನು ಸ್ವತಃ ಮೊದಲನೇ ಪತ್ನಿಯ ಮಗಳು ತಿಳಿಸಿದರು. ಅಷ್ಟೇ ಅಲ್ಲದೆ ಜೈಜಗದೀಶ್ ಅವರ ಎರಡನೇ ಪತ್ನಿ ವಿಜಯಲಕ್ಷ್ಮಿ ಅವರು ಸಹ ಮೊದಲನೆಯ ಪತ್ನಿಯ ಮಗಳಿಗೆ ಎಸ್ಎಂಎಸ್ ಮಾಡಿ ನಿಮ್ಮ ಜೊತೆ ನಾವಿದ್ದೇವೆ ಎಂದು ತಿಳಿಸಿದರು ಎಂದು ಸಹ ಹೇಳಿದರು. ಇನ್ನು ಇದನ್ನು ಕೇಳಿದ ಜೈಜಗದೀಶ್ ಅವರು ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟದ್ದು ನಿಜ.