ಡಿಕೆಶಿ ಯನ್ನು ಸ್ವಾಗತಿಸಲು ಹೊಗಿದ್ದ ಬೆಂಬಲಿಗರಿಗೆ ಸಿಕ್ಕಿದ್ದು ಏನು !?

admin
By admin
1 Min Read

ಡಿಕೆಶಿ ಬೆಂಗಳೂರು ಗೆ ಬಂದ ಸಂದರ್ಭದಲ್ಲಿ ಅವರ ಬೆಂಬಲಿಗರು  ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ನಿಂದಿಸಿದ್ದಾರೆ ಎಂದು ದೂರು ದಾಖಲಾಗಿದೆ. ಡಿಕೆಶಿ ಸ್ವಾಗತಿಸಲು ಬಂದಿದ್ದ ಬೆಂಬಲಿಗರ ವಿರುದ್ಧ ಇಂತಹ ಆರೋಪ ಮಾಡಲಾಗಿದೆ. ಟೋಲ್ ಗೇಟ್ ಬಳಿ ಕಾಂಗ್ರೆಸ್ ಬಾವುಟ ಹಿಡಿದು ಬೆಂಬಲಿಗರು ನಿಂತಿದ್ದರು. ಈ ವೇಳೆ ರಸ್ತೆಯಿಂದ ಪಕ್ಕಕ್ಕೆ ಸರಿಯಲು ಸೂಚನೆ ನೀಡಿದಾಗ ಮೇಲೆ ದಾಳಿ ಮಾಡಿ ನಿಂದಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಗನ್ ಮ್ಯಾನ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ

ಈ ವಿಚಾರಕ್ಕೆ ಸ್ಪಂದಿಸಿದ ನಾನು ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಫ್ಲೆಕ್ಸ್ ಹಾಕಿದ್ದ ಕಾರಣಕ್ಕೆ ನನ್ನ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸಲಾಗಿದೆ ಸಮಯ ಬಂದಾಗ ‌ನೊಡಿಕೊಳ್ಳುತ್ತೆನೆ ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

Share This Article