ಹೈದ್ರಾಬಾದ್ ನ ಹಯಾತ್ ನಗರದಲ್ಲಿ ಈ ರೀತಿಯ ಅಮಾನುಷ ಕೃತ್ಯ ನೆಡೆದಿದ್ದು ತನ್ನ ತಾಯಿಯಾನ್ನೆ ಕೊಂದ ಕೀರ್ತಿ ರೆಡ್ಡಿ ಸ್ಥಳೀಯ ಕಾಲೇಜಿನ ಪದವಿ ವಿದ್ಯಾರ್ಥಿನಿ. ಪಕ್ಕದ ಮನೆಯವನನ್ನೇ ಆಕೆ ಪ್ರೀತಿಸ್ತಾ ಇದ್ಲು. ಇದು ತಾಯಿ ರಜಿತಾಗೆ ಇಷ್ಟವಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಕೀರ್ತಿ ತಾಯಿಯನ್ನೇ ಕೊಂದಿದ್ದಾಳೆ ಅನ್ನೋದು ಪೊಲೀಸರ ಅನುಮಾನ.
ಕೀರ್ತಿಯ ಗೆಳೆಯ ಶಶಿ, ರಜಿತಾಳ ಕೈಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ, ಕೀರ್ತಿ, ತಾಯಿಯ ಕತ್ತು ಹಿಸುಕಿದ್ದಾಳೆ. ಮೂರು ದಿನ ಇಬ್ಬರೂ ಹೆಣದ ಜೊತೆ ಅದೇ ಮನೆಯಲ್ಲಿದ್ರು. ಆದ್ರೆ ಹೆಣ ಕೊಳೆತು ವಾಸನೆ ಬಂರುತ್ತಿದ್ದಂತೆ ಶವವನ್ನು ರೈಲ್ವೆ ಹಳಿಯ ಬಳಿ ಎಸೆದಿದ್ದಾರಾ ಎಂದು ಪೋಲಿಸರ ಅನುಮಾನವಾಗಿದೆ ಈ ಬಗ್ಗೆ ಇನ್ನು ತನಿಖೆ ನಡೆಯುತ್ತಿದೆ.