ಸುಮಲತಾ ಅಂಬರೀಶ್ ಅವರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದು ನಮಗೆಲ್ಲರಿಗೂ ತಿಳಿದೇ ಇದೆ. ಇನ್ನು ಸುಮಲತಾ ಅಂಬರೀಶ್ ಅವರು ಮಂಡ್ಯ ಸಂಸದೆಯಾಗಿ ಆಯ್ಕೆಯಾದ ನಂತರ ಮಂಡ್ಯದಲ್ಲಿ ಸರಿಯಾಗಿ ಭೇಟಿ ನೀಡದೇ ರೈತರ ಕಷ್ಟಗಳಿಗೆ ಸ್ಪಂದಿಸದೇ ಇದ್ದಾರೆ ಎಂಬ ಆರೋಪ ಅತಿಯಾಗಿ ಕೇಳಿಬರುತ್ತಿದೆ. ಇನ್ನು ಈ ಎಲ್ಲ ಆರೋಪಗಳ ನಡುವೆಯೇ ಇದೀಗ ಸುಮಲತಾ ಅವರ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಹೌದು ಮೇಮೊ ರೈಲಿಗೆ ಹೆಚ್ಚುವರಿ ಮಹಿಳಾ ಬೋಗಿಗಳನ್ನು ಅಳವಡಿಸಲಾಗಿದ್ದು ಈ ಒಂದು ಉದ್ಘಾಟನೆ ಸಮಾರಂಭಕ್ಕೆ ಸುಮಲತಾ ಅಂಬರೀಶ್ ಅವರನ್ನು ಕರೆಸಲಾಗಿತ್ತು. ಇನ್ನು ರೈಲು ಉದ್ಘಾಟನೆ ಮಾಡಲು ಬಂದ ಸುಮಲತಾ ಅಂಬರೀಶ್ ಅವರು ಹತ್ತು ಮೀಟರ್ ದೂರದಲ್ಲಿ ಸರಿಯಾದ ಸ್ಥಳದಲ್ಲಿ ನಿಂತಿದ್ದ ರೈಲಿನ ಬಳಿ ಹೋಗದೆ ತಾವು ನಿಂತಿದ್ದ ಸ್ಥಳಕ್ಕೇ ರೈಲನ್ನು ಕರೆಸಿಕೊಂಡು ಉದ್ಘಾಟನೆಯನ್ನು ಮಾಡಿದರು. ಇನ್ನು ಸುಮಲತಾ ಅಂಬರೀಶ್ ಅವರ ಈ ನಡೆಯನ್ನು ಸ್ಥಳೀಯರು ವಿರೋಧಿಸಿದ್ದಾರೆ ಹತ್ತು ಮೀಟರ್ ನಡೆಯದ ಇವರೆಂಥ ಜನಪ್ರತಿನಿಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.