ತಂದೆ ಇಲ್ಲದಿದ್ದ ಸಮಯದಲ್ಲಿ ಬೆನ್ನಿಗೆ ನಿಂತಿದ್ದು ಡಿ ಬಾಸ್ ಕಾಶಿನಾಥ್ ಅವರ ಪುತ್ರನ ಮಾತು..!

Must read

ಅಭಿಮನ್ಯು ಕಾಶಿನಾಥ್ ಅವರು ತುಂಬಾ ದಿನಗಳ ನಂತರ ಮೀಡಿಯಾಗೆ ಸಂದರ್ಶನವೊಂದನ್ನು ನೀಡಿದ್ದಾರೆ. ಈ ಸಂದರ್ಶನದ ವೇಳೆ ತಮ್ಮ ಮುಂದಿನ ಚಿತ್ರ ಮತ್ತು ಸಿನಿಮಾ ರಂಗ ಹಾಗೂ ಮುಂದೆ ಯಾವ ರೀತಿಯ ಕೆಲಸಗಳನ್ನು ಅವರು ಮಾಡಲಿದ್ದಾರೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು. ಹೀಗೆ ಮಾಹಿತಿ ನೀಡುವ ವೇಳೆ ಇತ್ತೀಚೆಗಷ್ಟೇ ಅವರು ತಮ್ಮ ತಂದೆಯನ್ನು ಕಳೆದುಕೊಂಡ ನೋವನ್ನು ಸಹ ತೋಡಿಕೊಂಡರು.

ಇದೇ ವೇಳೆ ತಮ್ಮ ತಂದೆ ನಿಧನ ಹೊಂದಿದ ನಂತರ ಯಾರು ತಮಗೆ ಸಹಾಯ ಮಾಡಿದರು ಎಂಬುದನ್ನು ಸಹ ಈ ಸಂದರ್ಶನದಲ್ಲಿ ಕಾಶಿನಾಥ್ ಅವರ ಪುತ್ರ ಅಭಿಮನ್ಯು ಕಾಶಿನಾಥ್ ಅವರು ಹೇಳಿಕೊಂಡರು. ಹೌದು ಕಾಶಿನಾಥ್ ಅವರ ನಿಧನದ ನಂತರ ಅಭಿಮನ್ಯು ಕಾಶಿನಾಥ್ ಅವರ ಬಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಂದು ಚಿನ್ನ ನಿಮಗೆ ಕಷ್ಟ ಏನಾದರೂ ಬಂದ್ರೆ ನನಗೆ ಒಂದು ಫೋನ್ ಮಾಡು ಹದಿನೈದು ನಿಮಿಷದಲ್ಲಿ ನಿನ್ನ ಬಳಿ ನಾನು ಇರ್ತೀನಿ ಎಂದು ಹೇಳಿದ್ದರಂತೆ. ಈ ವಿಷಯವನ್ನು ಸ್ವತಃ ಅಭಿಮನ್ಯು ಅವರೇ ಒನ್ಇಂಡಿಯಾ ಮೀಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡರು.

- Advertisement -spot_img

More articles

- Advertisement -spot_img

Latest article