ನಾಳೆ ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಬಹಳ ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು. ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಕನ್ನಡಿಗರೆಲ್ಲಾ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ನಾಳಿನ ಕನ್ನಡ ರಾಜ್ಯೋತ್ಸವ ಪುನೀತ್ ಮತ್ತು ಯಶ್ ಅಭಿಮಾನಿಗಳಿಗೆ ಡಬಲ್ ಸಂಭ್ರಮವನ್ನು ತಂದುಕೊಡಲಿದೆ. ಹೌದು ನಾಳಿನ ಕನ್ನಡ ರಾಜ್ಯೋತ್ಸವದ ಜೊತೆಗೆ ಮತ್ತೊಂದು ಸಂಭ್ರಮ ಅಪ್ಪು ಮತ್ತು ಯಶ್ ಅಭಿಮಾನಿಗಳ ಪಾಲಿಗೆ ಇದೆ.
ಪುನೀತ್ ಅಭಿನಯದ ರಾಜಕುಮಾರ ಮತ್ತು ಯಶ್ ಅಭಿನಯದ ಕೆಜಿಎಫ್ 1 ಚಿತ್ರಗಳು ನಾಳೆ ಮರು ಬಿಡುಗಡೆಯಾಗುತ್ತಿವೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಈ ಎರಡು ಚಿತ್ರಗಳನ್ನು ಬೆಂಗಳೂರಿನ ಚಿತ್ರಮಂದಿರದಲ್ಲಿ ಹೊಂಬಾಳೆ ಫಿಲ್ಮ್ಸ್ ಅವರು ಬಿಡುಗಡೆ ಮಾಡುತ್ತಿದ್ದಾರೆ. ರಾಜಕುಮಾರ ಮತ್ತು ಕೆಜಿಎಫ್ ಚಿತ್ರಗಳು ಕನ್ನಡ ಚಿತ್ರ ರಂಗದ ಕೀರ್ತಿ ಪತಾಕೆಯನ್ನು ಹಾರಿಸಿದ್ದಂತಹ ಚಿತ್ರಗಳು. ಇಂತಹ ಚಿತ್ರಗಳು ನಾಳೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಿಡುಗಡೆಯಾಗುತ್ತಿರುವುದು ಅಪ್ಪು ಮತ್ತು ಯಶ್ ಅಭಿಮಾನಿಗಳ ಪಾಲಿಗೆ ಡಬಲ್ ಧಮಾಕವೇ ಸರಿ..