ನಿನ್ನೆ ಬೆಂಗಳೂರು ಮತ್ತು ದೊಡ್ಡಬಳ್ಳಾಪುರ ನಡುವಿನ ಕೆಎಸ್ಆರ್ಟಿಸಿ ಬಸ್ ಸಂಖ್ಯೆ ತೀರಾ ಕಡಿಮೆ ಇತ್ತು ಸರಿಯಾದ ಸಮಯಕ್ಕೆ ಬಸ್ ಬಾರದ ಕಾರಣ ಪ್ರಯಾಣಿಕರು ಪರದಾಡಿದರು. ಕೆಎಸ್ಆರ್ಟಿಸಿ ಬಸ್ ಗಳನ್ನೇ ನಂಬಿ ಜನಸಾಮಾನ್ಯರು ಪ್ರತಿನಿತ್ಯ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚಾರ ಮಾಡುತ್ತಿರುತ್ತಾರೆ. ಇನ್ನು ಇಂತಹ ಕೆಎಸ್ಆರ್ ಟಿಸಿ ಬಸ್ ಗಳನ್ನು ಎಂಎಲ್ಎ ಪುತ್ರನ ಮದುವೆಗೆ ಬಳಸಿಕೊಂಡ ಕಾರಣ ನಿನ್ನೆ ಪ್ರಯಾಣಿಕರಿಗೆ ಸಂಕಷ್ಟ ಉಂಟಾಗಿತ್ತು.
ದೊಡ್ಡಬಳ್ಳಾಪುರದ ಶಾಸಕರಾದ ವೆಂಕಟರಮಣಯ್ಯ ಅವರ ಪುತ್ರನ ಮದುವೆಗೆ ಒಟ್ಟು ಮೂವತ್ತು ಕೆಎಸ್ಆರ್ ಟಿಸಿ ಬಸ್ ಗಳನ್ನು ಬಾಡಿಗೆಯಾಗಿ ನೀಡಲಾಗಿತ್ತು. ಬೆಂಗಳೂರು ಮತ್ತು ದೊಡ್ಡಬಳ್ಳಾಪುರ ಮಾರ್ಗದ ಬಸ್ ಗಳನ್ನು ಬಾಡಿಗೆಗೆ ನೀಡಲಾಗಿದೆ. ಬಾಡಿಗೆಗೆ ನೀಡಿದ್ದೇನೋ ಸರಿ ಆದರೆ ಇದಕ್ಕೆ ಬದಲಾಗಿ ಪರ್ಯಾಯ ಬಸ್ಗಳನ್ನು ಸಂಚಾರಕ್ಕೆ ಬಿಡದೇ ಇರುವುದೇ ಜನ ಪರದಾಡಲು ಕಾರಣವಾಗಿದೆ.