ಹೆಚ್.ಡಿ. ದೇವೇಗೌಡ ನವೆಂಬರ್ 6ರಂದು ಸಭೆಯನ್ನು ಕರೆದಿದ್ದರು ಆದರೆ ಈ ಸಭೆಯಲ್ಲಿ ಮುಖ್ಯವಾಗಿ ಹಾಜರಿರಬೇಕಿದ್ದ ಕುಮಾರಸ್ವಾಮಿ ಅವರು ಲಂಡನ್ ಗೆ ಹೊಗಿದ್ದಾರೆ ಎಂದು ಹೇಳಲಾಗುತ್ತಿದೆ ಸಭೆಯ ಉದ್ದೇಶವನ್ನೇ ಪ್ರಶ್ನಿಸುವಂತಾಗಿದೆ. ಕುಮಾರಸ್ವಾಮಿ ಗೈರುಹಾಜರಿಯಲ್ಲಿ ಸಭೆ ನಡೆಸಿದರೆ ಪ್ರಯೋಜನವೇನು ಎಂಬ ಮಾತುಗಳು ಕೆಲ ವಿಧಾನಪರಿಷತ್ ಸದಸ್ಯರಿಂದ ಕೇಳಿಬರುತ್ತಿದೆ.
ಅಲ್ಲದೆ ಮಾಧ್ಯಮ ಸಂವಾದ ಕಾರ್ಯಕ್ರಮದ ವೇಳೆ ಕುಮಾರಸ್ವಾಮಿ, ಯಡಿಯೂರಪ್ಪನವರ ಆಡಿಯೋವನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸುವುದಾಗಿ ಹೇಳಿದ್ದರು. ಈ ವಿಚಾರವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಅವಕಾಶವನ್ನು ಕುಮಾರಸ್ವಾಮಿ ಕೈಚೆಲ್ಲಿದ್ದಾರೆಂಬ ಮಾತುಗಳು ಕೇಳಿಬರುತ್ತಿದ್ದು, ಹಾಗು ಇದ್ದಕ್ಕಿಂತೆ ಲಂಡನ್ ತೆರಳಿದ್ದು ಏಕೆ ಎಂಬ ಪ್ರಶ್ನೆ ಕೂಡ ಕೇಳಿಬರುತ್ತಿದೆ .